ದಿನವೂ ಕ್ರೀಡಾಭ್ಯಾಸದಲ್ಲಿ ತೊಡಗಿ

20022022 Kampli cricet tornment
Published on

ಕಂಪ್ಲಿ: ಯುವಜನತೆ ನಿತ್ಯ ಕ್ರೀಡಾಭ್ಯಾಸದಲ್ಲಿ ತೊಡಗುವ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಮೆಟ್ರಿ ಹೊಸಕೋಟೆ ಜಗದೀಶ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆಪಿಎಲ್ ಸೀಜನ್-6 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಯುವಜನತೆಯಲ್ಲಿ ಕ್ರೀಡಾ ಜಾಗೃತಿಗಾಗಿ ಟಚ್ ಫಾರ್ ಲೈಫ್ ಸಂಸ್ಥಾಪಕ ನಾರಾ ಭರತ್‌ರೆಡ್ಡಿಯವರು ಪ್ರಥಮ ಬಹುಮಾನವಾಗಿ 44 ಸಾವಿರ ರೂ., ಎರಡನೇ ಬಹುಮಾನವಾಗಿ 22 ಸಾವಿರ ರೂ. ಮತ್ತು ಮೂರನೇ ಬಹುಮಾನವಾಗಿ 11 ಸಾವಿರ ರೂ. ಮತ್ತು ಟ್ರೋಫಿ ವಿತರಿಸಲಿದ್ದಾರೆ ಎಂದರು.

ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ನಾರಾಯಣಪ್ಪ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯ 10 ತಂಡ ಪಾಲ್ಗೊಂಡಿದ್ದವು. ಪಂದ್ಯಾವಳಿ ವ್ಯವಸ್ಥಾಪಕರಾದ ಬಿ.ನೂರು ಮುಕ್ತಾರ್, ಮಂಜುನಾಥ, ಉಮೇಶ್, ವಿಜಯ್, ಮಾಭಾಷ, ಶಿವು, ಪಿ.ಪ್ರದೀಪ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net