ಸಾಹಿತ್ಯದಿಂದ ಬದಲಾವಣೆ ಸಾಧ್ಯ - ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಅಭಿಮತ

kmp=1
Published on

ಕಂಪ್ಲಿ: ಕವಿತೆ ರಚನೆಗೆ ಕವಿಯ ಅನುಭವ ಮತ್ತು ಅನುಭಾವ ಸಿದ್ಧಿಯಾಗಬೇಕು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಕವಿ ಜಿ.ಪ್ರಕಾಶ್ ಅವರ ‘ಕಾವ್ಯ ಕಂಪನ’ ಕವನ ಸಂಕಲನ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು. ಸಾಹಿತ್ಯದ ಅಭಿರುಚಿಯಿಂದ ಬದಲಾವಣೆ ಸಾಧ್ಯ ಎಂದರು. ಕಸಾಪ ಗೌರವ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಕೃತಿ ಪರಿಚಯಿಸಿ ಮಾತನಾಡಿ, ಕವಿ ಪ್ರಕಾಶ ಅವರ ಕವಿತೆಗಳು ಪ್ರಾಸ, ಛಂದಸ್ಸು, ಯಾವುದೇ ಬಂಧಗಳಿಗೆ ಸಿಲುಕದೆ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತಿವೆ. ಸಂಕಲನದಲ್ಲಿ ಕವಿತೆ, ನೀಳ್ಗವಿತೆ, ಚುಟುಕು, ಆಧುನಿಕ ವಚನಗಳಿದ್ದು, ಸಮಾಜ ಸುಧಾರಣೆಗೆ ಚಿಕಿತ್ಸಾ ರೂಪದಲ್ಲಿವೆ ಎಂದರು.

ಸಹಾಯಕ ಪ್ರಾಧ್ಯಾಪಕ ಎಂ.ಪಿ.ಬಾಲಾಜಿ ಮಾತನಾಡಿ, ಕರೊನಾ ದಿನಗಳಲ್ಲಿ ಸಾಹಿತ್ಯವೇ ಸೃಜನಶೀಲರ ವ್ಯಕ್ತಿತ್ವದ ಕೌಶಲ ಹೆಚ್ಚಿಸಿದೆ. ಮಕ್ಕಳು ಮೊಬೈಲ್ ಮಂಪರಿನಲ್ಲಿದ್ದು ಸಂವೇದನಾಶೀಲತೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್, ಕರವೇ ತಾಲೂಕು ಅಧ್ಯಕ್ಷ ಬಿ.ರಮೇಶ್, ಲೇಖಕ ಜಿ.ಪ್ರಕಾಶ್, ಎಸ್.ರಾಮಪ್ಪ, ಎಸ್.ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ವೀರಮ್ಮ ನಾಗರಾಜ, ಚಂದ್ರಯ್ಯ ಸೊಪ್ಪಿಮಠ, ಎಸ್.ಡಿ.ಬಸವರಾಜ, ಡಾ.ಸುನೀಲ್, ಮುದುಕಪ್ಪ ನೆಲಜೇರಿ, ಸಂತೋಷ್ ಸೋಗಿ, ಎಸ್.ವಿಜಯಲಕ್ಷ್ಮೀ, ಬೂದಗುಂಪಿ ಹುಸೇನಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net