ಶಾಲೆಗಳ ಬಲವರ್ಧನೆಗೆ ಯೋಜನೆ ರೂಪಿಸಲಿ

kmp-2
ಕಂಪ್ಲಿಯಲ್ಲಿ ಕರವೇ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ವಿ.ವೆಂಕಟರಮಣಗೆ ಆದೇಶಪತ್ರ ನೀಡಲಾಯಿತು. ಪ್ರಮುಖರಾದ ಅಬ್ಬಿಗೇರಿ ರಾಮಣ್ಣ, ವಿ.ಎಚ್.ಹುಲುಗಪ್ಪ, ಕೆ.ಎಸ್.ಚಾಂದ್‌ಬಾಷ, ಬಿ.ರಮೇಶ, ಜಿ.ರಾಮಣ್ಣ, ಎಂ.ಗೋಪಾಲ ಇತರರಿದ್ದರು.
Published on

ಕಂಪ್ಲಿ; ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಆಡಳಿತದ ಎಲ್ಲ ಸ್ತರಗಳಲ್ಲೂ ಕನ್ನಡ ಭಾಷೆ ವ್ಯಾಪಕವಾಗಿ ಬಳಕೆಯಾಗಬೇಕಿದೆ ಎಂದು ಕರವೇ ಜಿಲ್ಲಾಧ್ಯಕ್ಷ ವಿ.ಎಚ್.ಹುಲುಗಪ್ಪ ಹೇಳಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರಿ ಕನ್ನಡ ಶಾಲೆಗಳ ಬಲವರ್ಧನೆಗೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ.

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕರವೇ ಕಾರ್ಯಕರ್ತರು ಟೊಂಕ ಕಟ್ಟಿ ಶ್ರಮಿಸಬೇಕು ಎಂದರು. ಇದೇ ವೇಳೆ ಕರವೇ ತಾಲೂಕು ಅಧ್ಯಕ್ಷರನ್ನಾಗಿ ವಿ.ವೆಂಕಟರಮಣ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ಕರವೇ ರಾಜ್ಯ ಸಂಚಾಲಕ ಅಬ್ಬಿಗೇರಿ ರಾಮಣ್ಣ, ಪ್ರಮುಖರಾದ ಕೆ.ಎಸ್.ಚಾಂದ್‌ಬಾಷ, ಯರ‌್ರಿಸ್ವಾಮಿ, ಕರೇಕಲ್ ಮನೋಹರ, ಬಿ.ಸಿದ್ದಪ್ಪ, ಜಿ.ರಾಮಣ್ಣ, ಬಿ.ರಮೇಶ, ಬಿ.ನಾಗೇಂದ್ರ, ಮೌನೇಶ್, ಬಿ.ದೇವೇಂದ್ರ, ಕೆ.ಷಣ್ಮುಖ, ಭಾಸ್ಕರರೆಡ್ಡಿ, ಎಂ.ಗೋಪಾಲ, ಶೇಕ್ಷಾವಲಿ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net