ಟ್ರಾಕ್ಟ್ಯರ್ ಬಡಿದು ಕಾರ್ಮಿಕಗೆ ಗಾಯ

12052022 kampli accident
Published on

ಕಂಪ್ಲಿ: ತಾಲೂಕಿನ ಕಣವಿ ತಿಮ್ಮಲಾಪುರ ಗ್ರಾಮದ ಹಿರೆಕೆರೆಯಲ್ಲಿ ಹೂಳೆತ್ತುವಾಗ ಟ್ರಾಕ್ಟ್ಯರ್ ಬಡಿದು ನರೇಗಾ ಕೂಲಿ ಕಾರ್ಮಿಕನೊಬ್ಬ ಗುರುವಾರ ಗಾಯಗೊಂಡಿದ್ದಾನೆ. ಹೊಸನೆಲ್ಲೂಡಿಯ ಎಚ್.ಮೌಲಪ್ಪ ಖಾಸಿಮಪ್ಪ ಗಾಯಗೊಂಡಾತ. ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕರೆದುಕೊಂಡು ಹೋಗಲಾಗಿದೆ. ಪಿಡಿಒ ತಾರು ಲಕ್ಷ್ಮಣನಾಯ್ಕ ಮತ್ತು ತಾಪಂ ಅಧಿಕಾರಿ ಕೆ.ಎಸ್.ಮಲ್ಲನಗೌಡ ಗಾಯಾಳುವನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net