ಕನ್ನಡ ರಕ್ಷಣೆಗೆ ಕಸಾಪ ಸದಸ್ಯರಾಗಿ

12092022 Kampli kasapa grama sabhe
Published on


ಕಂಪ್ಲಿ: ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗುವ ಮೂಲಕ ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಕೈಜೋಡಿಸಿ ಎಂದು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಹೇಳಿದರು.

ರಾಮಸಾಗರ ಗ್ರಾಮದ ರಾಧ ಆಶ್ರಮದಲ್ಲಿ ಕಸಾಪ ತಾಲೂಕು ಘಟಕದಿಂದ ಭಾನುವಾರ ಸಂಜೆ ಹಮ್ಮಿಕೊಂಡ ಪ್ರಥಮ ಗ್ರಾಮಸಭೆ ಮತ್ತು ಕಸಾಪ ಸದಸ್ಯತ್ವ ಅಭಿಯಾನದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಸಾಪ ಸದಸ್ಯತ್ವ ತಂತ್ರಾಂಶಕ್ಕೊಳಪಟ್ಟಿದ್ದು ಜಾಗತಿಕ ವಿಸ್ತಾರ ಹೊಂದಿದೆ. ಕಸಾಪ ಆ್ಯಪ್ ಮೂಲಕ ಕನ್ನಡ ಬಲ್ಲವರು, 18 ವರ್ಷ ಮೇಲ್ಪಟ್ಟ ಯಾರಾದರೂ ಸದಸ್ಯತ್ವ ಪಡೆದುಕೊಳ್ಳಬಹುದು. ಶೀಘ್ರದಲ್ಲಿಯೇ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದರು. ಕಸಾಪ ಕಾರ್ಯದರ್ಶಿ ಅಂಬಿಗರ ಮಂಜುನಾಥ ಮಾತನಾಡಿ, ಮುಂದಿನ ದಿನಗಳಲ್ಲಿ ಪರಿಷತ್‌ನಿಂದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಸಾಪ ಕೋಶಾಧ್ಯಕ್ಷ ಎಸ್.ಡಿ.ಬಸವರಾಜ್, ತಾಲೂಕು ಸಂಘಟನಾ ಕಾರ್ಯದರ್ಶಿ ಕಾಳಿಂಗವರ್ಧನ ಹಾದಿಮನಿ, ಪ್ರಮುಖರಾದ ಎಚ್.ಸಿ.ಚನ್ನಬಸವನಗೌಡ, ಟಿ.ನಿರಂಜನ, ಸುಣಗಾರ ಸುರೇಶ್, ರಾಮಾಂಜನೇಯಲು, ಬೋವೇರು ಮಂಜುನಾಥ, ಅಶೋಕ್ ಕುಕನೂರು, ಬಡಿಗೇರ್ ಜಿಲಾನ್‌ಸಾಬ್, ಶ್ಯಾಂಸುಂದರರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net