ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಿ

Kampli Manavi
ಕಂಪ್ಲಿಯಲ್ಲಿ ಪೋಸ್ಟ್ ಮಾಸ್ಟರ್ ಹುಲುಗಪ್ಪ ಅವರಿಗೆ ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಪಿ.ಶಂಭುಲಿಂಗ, ಹರೀಶ, ವಿ.ಬಿ.ನಾಗರಾಜ, ವೀರೇಶ, ಚೇತನ, ತಿಪ್ಪೇಸ್ವಾಮಿ, ಮಂಜುನಾಥ ಇತರರಿದ್ದರು.
Published on

ಕಂಪ್ಲಿ: ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಹುಲುಗಪ್ಪಗೆ ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು.

ತಾಲೂಕು ಅಧ್ಯಕ್ಷ ಶಂಭುಲಿಂಗ ಮಾತನಾಡಿ, ಕನ್ನಡ ಭಾಷೆ ಪುರಾತನವಾಗಿದ್ದು ಅಂತಾರಾಷ್ಟ್ರೀಯ ಭಾಷಾ ಸ್ಥಾನಮಾನ ದೊರಕಬೇಕಿದೆ. ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ, ರೈಲು ನಿಲ್ದಾಣ ಸೇರಿ ಕೇಂದ್ರ ಸರ್ಕಾರ ಸ್ವಾಮ್ಯದ ಎಲ್ಲ ಅಧಿಕಾರಿ ವರ್ಗದವರು ಕನ್ನಡ ಭಾಷೆಯನ್ನು ಕಚೇರಿ ಹಾಗೂ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು.

ಸೆ.14ರಂದು ಹಿಂದಿ ದಿವಸ್‌ಗೆ ಉತ್ತೇಜನ ನೀಡದೆ ಅಂತಾರಾಷ್ಟ್ರೀಯ ಕನ್ನಡ ಭಾಷಾ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಹರೀಶ, ವಿ.ಬಿ.ನಾಗರಾಜ, ವೀರೇಶ, ಚೇತನ, ತಿಪ್ಪೇಸ್ವಾಮಿ, ಮಂಜುನಾಥ, ಸಿದ್ದೇಶ ಹಿರೇಮಠ, ಮೊಹಮ್ಮದ್ ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net