ಕನ್ನಡ ಭವನಕ್ಕೆ ನಿವೇಶನ ಕೊಡಿ

kampli kasapa
ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಕಸಾಪ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಷಣ್ಮುಖಪ್ಪ ಚಿತ್ರಗಾರ್, ಕ.ಮ.ಹೇಮಯ್ಯಸ್ವಾಮಿ, ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಕಾಳಿಂಗವರ್ಧನ ಹಾದಿಮನಿ, ಬಡಿಗೇರ ಜಿಲಾನ್‌ಸಾಬ್ ಇತರರಿದ್ದರು.
Published on

ಕಂಪ್ಲಿ: ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಒತ್ತಾಯಿಸಿ ಕಸಾಪ ತಾಲೂಕು ಘಟಕ ಗುರುವಾರ ಶಾಸಕ ಜೆ.ಎನ್.ಗಣೇಶ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಮನವಿ ಸಲ್ಲಿಸಿತು.

ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಕಳೆದ 20 ವರ್ಷಗಳಿಂದ ನಿವೇಶನ ನೀಡುವಂತೆ ಪುರಸಭೆಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಮಂಜೂರು ಮಾಡಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕು. ಕನ್ನಡ ಧ್ವಜಾರೋಹಣಕ್ಕಾಗಿ ಪಟ್ಟಣದ ನಡುವಲ ಮಸೀದಿ ಹತ್ತಿರ ಹೈಮಾಸ್ಟ್ ದೀಪ ಕಂಬದ ಬಳಿ ಕನ್ನಡ ಕಟ್ಟೆ ನಿರ್ಮಿಸಬೇಕು. ವಾಲ್ಮೀಕಿ ವೃತ್ತದಿಂದ ರಾಮಸಾಗರ ಕ್ರಾಸ್ ತನಕದ ರಸ್ತೆಗೆ ಕುವೆಂಪು ರಸ್ತೆ ಎಂದು ಹೆಸರಿಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಕ.ಮ.ಹೇಮಯ್ಯಸ್ವಾಮಿ, ಕಾಳಿಂಗವರ್ಧನ ಹಾದಿಮನಿ, ಎಸ್.ಶಾಮಸುಂದರರಾವ್, ಬಡಿಗಾರ ಜಿಲಾನ್‌ಸಾಬ್, ಯು.ಎಂ.ವಿದ್ಯಾಶಂಕರ್, ಎಲಿಗಾರ ವೆಂಕಟರೆಡ್ಡಿ, ಅಶೋಕ ಕುಕನೂರು. ಬುರೆ ವಿರೂಪಾಕ್ಷಿ, ಜಿ.ಪ್ರಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net