ಕೇಂದ್ರ-ರಾಜ್ಯ ಸರ್ಕಾರದ್ದು ಜನವಿರೋಧಿ ಆಡಳಿತವೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಯುವ ಬ್ಲಾಕ್ ಕಾಂಗ್ರೆಸ್ ಸಮಿತಿ

24022021 Kampli Youth congress protest
Published on

ಕಂಪ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿವೆ ಎಂದು ಆಪಾದಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ, ಕಂಪ್ಲಿ ಮತ್ತು ಕುರುಗೋಡು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಉಭಯ ಸರ್ಕಾರಗಳು ಹಿಟ್ಲರ್ ಆಡಳಿತ ನಡೆಸುತ್ತಿವೆ. ದಿನೇ ದಿನೆ ದಿನಸಿ ಸಾಮಾನು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ. ರೈತರು, ಕಾರ್ಮಿಕರ ಹಿತಾಸಕ್ತಿ ಬಯಸದ ಇಂತಹ ಸರ್ಕಾರಗಳನ್ನು ಜನತೆ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪಿ. ಶಶಿಕುಮಾರ್ ಮಾತನಾಡಿ, ಪ್ರಧಾನಿ ಮೋದಿಯವರು ಧರ್ಮ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾದಿಲಿಂಗಪ್ಪ, ಮಹಿಳಾ ಅಧ್ಯಕ್ಷೆ ಮುರಾರಿ ಲಕ್ಷ್ಮಿ, ಶ್ರೀದೇವಿ, ಪ್ರಮುಖರಾದ ಕೆ.ಎಸ್. ಚಾಂದ್ ಬಾಷಾ, ಭಟ್ಟ ಪ್ರಸಾದ್, ಹಬೀಬ್ ರೆಹಮಾನ್, ಕೆ. ಬಸವರಾಜ್, ಓಂಕಾರಪ್ಪ, ಕೆ. ಷಣ್ಮುಖಪ್ಪ, ಮಲ್ಲಿಕಾರ್ಜುನ, ಲೋಕನಗೌಡ, ಮನೋಹರ, ಮಹೇಶ, ಮಾಯಪ್ಪ, ಸುಭಾಷ್, ಚನ್ನಬಸವ, ಪುರಸಭೆ ಸದಸ್ಯರು, ಆಟೋ ಚಾಲಕರು, ಯುವ ಕಾಂಗ್ರೆಸ್ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net