ಸೇತುವೆ ನಿರ್ಮಾಣ ಶೀಘ್ರ ಆರಂಭಿಸಿ; ಕಂಪ್ಲಿ-ಗಂಗಾವತಿ ತುಂಗಭದ್ರಾ ನದಿ ಸೇತುವೆ ಹೋರಾಟ ಸಮಿತಿ ಒತ್ತಾಯ

12062022 KAMPLI KAREKAL SHANKRAPPA)
Published on

ಕಂಪ್ಲಿ: ಕಂಪ್ಲಿ ಕೋಟೆಯ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ಕಂಪ್ಲಿ-ಗಂಗಾವತಿ ತುಂಗಭದ್ರಾ ನದಿ ಸೇತುವೆ ಹೋರಾಟ ಸಮಿತಿ ಒತ್ತಾಯಿಸಿದೆ.

ಈ ಕುರಿತು ಸಮಿತಿ ಅಧ್ಯಕ್ಷ ಕರೇಕಲ್ ಶಂಕ್ರಪ್ಪ, ಸಂಚಾಲಕ ಸಜ್ಜೇದ ಸಿದ್ದಲಿಂಗ, ಕಾರ್ಯದರ್ಶಿ ಇಟಗಿ ವಿರೂಪಾಕ್ಷಿ ಪ್ರಮುಖರಾದ ಎಚ್.ಗುಂಡಪ್ಪ ಭಾನುವಾರ ಹೇಳಿಕೆ ನೀಡಿ, ಒತ್ತಾಯಿಸಿದ್ದಾರೆ.

ಆರು ದಶಕಗಳ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನಿರಂತರ ಪ್ರಯತ್ನದಿಂದಾಗಿ ಕೆಆರ್‌ಡಿಸಿಐಲ್ ಯೋಜನಡಿ 67.70ಕೋಟಿ ರೂ. ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಶಾಸಕ ಜೆ.ಎನ್.ಗಣೇಶ್ ಅವರು ಅಧಿವೇಶನದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಧ್ವನಿ ಎತ್ತಿದ್ದರು. ಕಂಪ್ಲಿ-ಗಂಗಾವತಿ ತುಂಗಭದ್ರಾ ನದಿ ಸೇತುವೆ ಹೋರಾಟ ಸಮಿತಿಯಿಂದ ನೂತನ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ 2014-15ರಲ್ಲಿ 40ಕೋಟಿ ರೂ.ಮಂಜೂರಾಗಿತ್ತು. ಆದರೆ, ನೂತನ ಸೇತುವೆ ನಿರ್ಮಾಣದ ಬದಲಿಗೆ 1.36ಕೋಟಿ ರೂ.ನಲ್ಲಿ ಸೇತುವೆಯ ಬಲವರ್ಧನೆ ಕೈಗೊಳ್ಳಲಾಯಿತು. ಈಗ ಹಾಗಾವುದು ಬೇಡ. ಕೂಡಲೇ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಒಂದು ವರ್ಷದೊಳಗೆ ಗುಣಮಟ್ಟದ ಸೇತುವೆ ನಿರ್ಮಾಣಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net