

ಕಂಪ್ಲಿ: ಸಮೀಪದ ಕಮಲಾಪುರ ಯಾತ್ರಿ ನಿವಾಸದ ರೈತ ಸಮುದಾಯ ಭವನದಲ್ಲಿ ವಿಜಯನಗರ-ಬಳ್ಳಾರಿ ಜಿಲ್ಲಾ ಪ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದ ಮೊದಲ ಸರ್ವಸದಸ್ಯರ ಸಭೆ ಭಾನುವಾರ ಜರುಗಿತು.
ಒಕ್ಕೂಟ ಅಧ್ಯಕ್ಷ ಎಚ್.ಕರೇಗೌಡ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೌಕರರು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದರು.
ಒಕ್ಕೂಟ ಪದಾಧಿಕಾರಿಗಳಾದ ದ್ಯಾಮಣ್ಣನವರ ಬಸವರಾಜ್, ಕಟ್ಟೆ ಎರ‌್ರಿಸ್ವಾಮಿ, ಪದ್ಮಶಾಲಿ ಆಂಜನೇಯ, ಈ.ಜಡೇಶರೆಡ್ಡಿ, ಡಿ.ಎಚ್.ನಿಂಗಪ್ಪ, ಹುಲಿಕುಂಠಪ್ಪ ಬಣಗಾರ್, ಬೈಲೂರು ಮದ್ವೇಶ್ವರರಾವ್, ಎ.ರಾಘವೇಂದ್ರ, ಜಂಬಣ್ಣ ಹಿರೇಗೌಡ್ರು, ಡಿಂಡಿ ಮಹರ್ಷಿ ಗೌಡ್ರು, ಚೊಕ್ಕ ಬಸವರಾಜ್, ಎ.ವಿಠ್ಠಲ್‌ರಾವ್ ಇದ್ದರು.
ಮುಖ್ಯಕಾರ್ಯನಿರ್ವಾಹಕರಾದ ಅಮೀನಾಬೇಗಂ, ಸಿಬ್ಬಂದಿ ವೀಣಾ, ಲತಾಕುಮಾರಿ, ಅವಳಿ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.