

ಕಂಪ್ಲಿ: ಜ್ಯೋತಿಷ್ಯ ಬಾಳಿಗೆ ಬೆಳಕು ನೀಡುವ ಶಾಸ್ತ್ರವಾಗಿದೆ ಎಂದು ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ಪ್ರತಿಪಾದಿಸಿದರು.
ಯುಗಾದಿ ಪಾಡ್ಯ ನಿಮಿತ್ತ ಶ್ರೀಮಠದಲ್ಲಿ ಬುಧವಾರ ಆಯೋಜಿಸಿದ್ದ ಪಂಚಾಂಗ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜ್ಯೋತಿಷ್ಯಶಾಸ್ತ್ರಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ಅದರ ತತ್ವ ಅರಿತುಕೊಳ್ಳುವುದು ಅಗತ್ಯವಾಗಿದೆ. ಮಾನವೀಯತೆ, ನೈತಿಕತೆ, ಪ್ರಾಮಾಣಿಕತೆ, ಧಾರ್ಮಿಕ ಭಾವನೆಯೊಂದಿಗೆ ಮಾನವ ಜೀವಿಸಬೇಕು.
ಪರೋಪಕಾರ ಜೀವನ ಶ್ರೇಷ್ಠವಾದದ್ದು. ಎಲ್ಲರೊಂದಿಗೆ ಪರಸ್ಪರ ಪ್ರೀತಿಯಿಂದ ಜೀವಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶೋಭಾಕೃತನಾಮ ಸಂವತ್ಸರದಲ್ಲಿ ಗಾಳಿ, ಮಳೆ, ಬೆಳೆ, ಪ್ರಕೃತಿ, ರಾಜಕೀಯ ವಿದ್ಯಮಾನ, ಹೈನು, ಕಾಳುಕಡಿ ಕುರಿತು ಆಯ-ವ್ಯಯ ಮಾಹಿತಿ ನೀಡಿದರು. ಸರ್ವರೂ ಪರಿಸರಕ್ಕೆ ಪೂರಕವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಪ್ರಮುಖರಾದ ಚೇತನಾ ಬಸವರಾಜಶಾಸ್ತ್ರಿ, ಸ್ವಪ್ನ ಉದಯಶಂಕರ್, ಯು.ಎಂ.ವಿದ್ಯಾಶಂಕರ್, ಜೆ.ಎಂ.ಚನ್ನಬಸವರಾಜ, ಬೆನಕನಾಳಮಠದ ಮುತ್ತು ಕಲ್ಯಾಣಚೌಕಿಮಠದ ಪ್ರದೀಪ್, ಜಿ.ಚಂದ್ರಶೇಖರಗೌಡ, ಸಂತೋಷ್ ಕೊಟ್ರಪ್ಪ ಸೋಗಿ, ಅರವಿ ಅಂಬರೀಷ, ಕೊಟ್ರೇಶ್, ನಂದಿಕೋಲು ಶಿವಪ್ರಸಾದ್, ಅಳ್ಳಿ ನಾಗರಾಜ, ಜವಳಿ ವೀವೇಕ, ರಾಘವೇಂದ್ರ, ರವಿಕುಮಾರ್ ಇತರರು ಇದ್ದರು.