ಕಂಪ್ಲಿಯ ಕಲ್ಮಠ ಅಭಿವೃದ್ಧಿಗೆ ಟ್ರಸ್ಟ್ ರಚನೆ; ಶ್ರೀ ಅಭಿನವ ಪ್ರಭು ಸ್ವಾಮೀಜಿ ಹೇಳಿಕೆ

140920 Kampi Kalmatha Member Meeting
ರಾಮಸಾಗರದಲ್ಲಿ ಏರ್ಪಡಿಸಿದ್ದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಶ್ರೀಕ್ಷೇತ್ರ ಕಲ್ಮಠ ಟ್ರಸ್ಟ್ ಅಧ್ಯಕ್ಷ ಶ್ರೀ ಅಭಿನವ ಪ್ರಭು ಸ್ವಾಮೀಜಿ ಮಾತನಾಡಿದರು.
Published on

ಕಂಪ್ಲಿ: ಪಟ್ಟಣದ ಕಲ್ಮಠದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಅನ್ನ ದಾಸೋಹ ಪರಂಪರೆ ಸೇರಿ ಸಮಗ್ರ ಅಭಿವೃದ್ಧಿಗೆ ನೂತನ ಟ್ರಸ್ಟ್ ರಚಿಸಲಾಗಿದೆ ಎಂದು ಮಠದ ಟ್ರಸ್ಟ್ ಅಧ್ಯಕ್ಷ ಶ್ರೀ ಅಭಿನವ ಪ್ರಭು ಸ್ವಾಮೀಜಿ ಹೇಳಿದರು.

ರಾಮಸಾಗರ ಗ್ರಾಮದ ಎಚ್.ಶಿವಶಂಕರಗೌಡರ ನಿವಾಸದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಲ್ಮಠ ವಿರಕ್ತ ಮಠ ಪರಂಪರೆ ಹೊಂದಿದೆ. ಟ್ರಸ್ಟ್ ಮೂಲಕ ಮಠದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಉದ್ದೇಶಿಸಲಾಗಿದೆ. ಪ್ರತಿ ವರ್ಷ ಮಹಾಜನ ಸಭೆ ಕರೆದು ಮಠದ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಹಿಂದಿನ ಆಡಳಿತ ಮಂಡಳಿ ಅಧಿಕೃತವಾಗಿ ನೋಂದಣಿಯಾಗಿರಲಿಲ್ಲ ಎಂದರು.ಟ್ರಸ್ಟ್ ಕಾರ್ಯಾಧ್ಯಕ್ಷ ಶಿವಶಂಕರಗೌಡ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ: ಶ್ರೀಕ್ಷೇತ್ರ ಕಲ್ಮಠ ಟ್ರಸ್ಟ್‌ಗೆ ಮಠದ ಶ್ರೀ ಅಭಿನವ ಪ್ರಭು ಸ್ವಾಮೀಜಿ(ಅಧ್ಯಕ್ಷ), ಶಿವಶಂಕರಗೌಡ (ಕಾರ್ಯಾಧ್ಯಕ್ಷ), ಜಿ.ಲಿಂಗನಗೌಡ, ಐ.ಬಸವರಾಜ ಗೌಡ, ಜಗನ್ನಾಥ ಗೌಡ, ಜಿ.ಶಿವಜಾತ ಗೌಡ, ವಿ.ಕೊಟ್ರೇಶ ಗೌಡ(ಉಪಾಧ್ಯಕ್ಷರು), ಪಿ.ವೆಂಕನಗೌಡ್ರು(ಸಂ.ಕಾರ್ಯದರ್ಶಿ), ಬಿ.ವಿರೂಪಾಕ್ಷಗೌಡ (ಸಹ ಕಾರ್ಯದರ್ಶಿ), ಸಿ.ಮಲ್ಲನಗೌಡ್ರು(ಖಜಾಂಚಿ), ಸದಸ್ಯರಾಗಿ ಜಿ.ಚಂದ್ರಶೇಖರಗೌಡ, ಎಚ್.ಎಂ.ಪಂಡಿತಾರಾಧ್ಯ, ಬಿ.ಹರ್ಷವರ್ಧನ, ಟಿ.ಎಚ್.ಎಂ.ಮಹೇಶ, ವೀರಭದ್ರಯ್ಯ, ಸಿದ್ದಲಿಂಗೇಶ್ವರ, ಧರ್ಮಸಾಗರ ಮಂಜುನಾಥಗೌಡ, ಜಗದೀಶ, ಜೆ.ಭರಮರೆಡ್ಡಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net