ಬಳ್ಳಾರಿ ಜಿಲ್ಲೆಯ ವಿವಿಧೆಡೆ ಜೋಕುಮಾರಸ್ವಾಮಿಗೆ ವಿದಾಯ

10092022 Kampli jokumarswami
Published on

ಕಂಪ್ಲಿ: ಸಮೃದ್ಧ ಮಳೆ, ಬೆಳೆ, ಲೋಕಕಲ್ಯಾಣಕ್ಕಾಗಿ ಸಂಕಲ್ಪಿಸಿ ವಾರಾದ್ಯಂತ ಜರುಗಿದ ಜೋಕುಮಾರ ಪೂಜೆ ಅನಂತಹುಣ್ಣಿಮೆ ಶನಿವಾರ ಮುಕ್ತಾಯಗೊಂಡಿತು.

ಹಳೇ ದರೋಜಿ ಗ್ರಾಮದ ಗಂಗಾಮತಸ್ಥರ ಮನೆಯಲ್ಲಿ ಜನಿಸಿರುವ ಜೋಕುಮಾರಸ್ವಾಮಿಯನ್ನು ಕಳೆದೊಂದು ವಾರದಿಂದ ಬಾರಿಕೇರ ಸಮುದಾಯ ಮಹಿಳೆಯರ ಗುಂಪು ಬಿದಿರು ಪುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಮನೆಗಳಿಗೆ ತೆರೆಳಿದರು.

ದರೋಜಿಯ ಜೋಕುಮಾರ ಪದಗಳ ಕಲಾಮೇಳದ ಕಲಾವಿದರರಾದ ಈರಮ್ಮ, ನಾಗಮ್ಮ, ಚಂದ್ರಮ್ಮ, ಹುಲಿಗೆಮ್ಮ, ಮಹಾಂತಮ್ಮ, ಜಡೆಮ್ಮ, ಶಾರದಮ್ಮ, ಸಾವಿತ್ರಮ್ಮ, ದೊಡ್ಡ ಈರಮ್ಮ, ಸಣ್ಣ ಈರಮ್ಮ ಇತರರು ಮನೆ ಮನೆಗೆ ತಂದ ಜೋಕುಮಾರಸ್ವಾಮಿಯನ್ನು ಅನೇಕರು ಪೂಜಿಸಿ ದವಸ ಧಾನ್ಯಗಳನ್ನು ಸಲ್ಲಿಸಿದರು. ಹೀಗೆ ವಾರಾದ್ಯಂತ ಸಂಗ್ರಹಿಸಿದ ಪದಾರ್ಥಗಳನ್ನು ಬಳಸಿ ಶನಿವಾರ ಸಂಜೆ ಜೋಕುಮಾರಸ್ವಾಮಿಗೆ ನೈವೇದ್ಯ ಸಲ್ಲಿಸಿ ನಂತರ ಕೆರೆ ಬಳಿಯ ಮಡಿವಾಳರ ಕಲ್ಲಿನ ಬಳಿ ಜೋಕುಮಾರಸ್ವಾಮಿಯನ್ನು ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net