ಉಭಯ ಸರ್ಕಾರ ಹಿತಾಸಕ್ತಿ ತೋರಲಿ

06022023 CHNE
Published on

ಕಂಪ್ಲಿ: ತಾಲೂಕಿನ ಇಟಿಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತುಂಗಭದ್ರಾ ನದಿಯಿಂದ ಮೆರವಣಿಗೆ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿತು. ಕಳಸಾದಾರತಿ, ಪೂರ್ಣಕುಂಭ, ಡೊಳ್ಳು ಕುಣಿತ, ಭಜನಾವೃಂದಗಳು ಪಾಲ್ಗೊಂಡಿದ್ದವು. ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಪಕ್ಕಿರಪ್ಪ ಮಾತನಾಡಿ, ಗಂಗಾಮತಸ್ಥರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಎಸ್ಟಿ ಮೀಸಲಿಗೆ ಸೇರ್ಪಡೆಗೊಳಿಸುವಲ್ಲಿ ಉಭಯ ಸರ್ಕಾರಗಳು ಹಿತಾಸಕ್ತಿ ತೋರಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಮಣ್ಣೂರ್ ವೆಂಕಟೇಶ್, ಪ್ರಮುಖರಾದ ಎಂ.ಅಂಜಿನಪ್ಪ, ಲಕ್ಷ್ಮಣ, ಕಂಪ್ಲಿ ಈರಣ್ಣ, ಗೌಡ್ರು ವೆಂಕಟೇಶ, ಇಟ್ಗಿಮಾರೆಪ್ಪ, ಸಣ್ಣ ವೆಂಕಟೇಶ, ಎಂ.ಎಲ್ಲಪ್ಪ, ಎಚ್.ನರಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net