

ಕಂಪ್ಲಿ: ತಾಲೂಕಿನ ನಂ.3ಸಣಾಪುರ ಗ್ರಾಪಂ ಕಚೇರಿ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಲತಾರೆಡ್ಡಿ ಮಾತನಾಡಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಯಿಂದ ವೈಯಕ್ತಿಕ ಮತ್ತು ಕೌಟುಂಬಿಕ ಪ್ರಗತಿ ಸಾಧಿಸಲು ಸಾಧ್ಯ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ಡಾ.ಷಂಷದ್‌ಬೇಗಮ್, ಸಿಎಚ್‌ಒ ಕಲ್ಯಾಣಿ, ಸಿಎಚ್‌ಸಿ ನೇತ್ರ ಅಧಿಕಾರಿ ಪ್ರಕಾಶಗೌಡ ಕಣ್ಣಿನ ತಪಾಸಣೆ ಮಾಡಿದರು. ಮಕ್ಕಳ ರಕ್ಷಣ ಅಧಿಕಾರಿ ಚನ್ನಬಸಪ್ಪ ಪಾಟೀಲ್ ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ನಾನಾ ಕ್ಷೇತ್ರದ ಸಾಧಕಿಯರನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷ ವೈ.ರಮಣಯ್ಯ, ಪಿಡಿಒ ಹಾಲಹರವಿ ಶೇಷಗಿರಿ ಇತರರಿದ್ದರು.