ಖಾತೆ ಹಕ್ಕು ಬದಲಾವಣೆಗಾಗಿ ತಾಯಿ-ಮಗ ಧರಣಿ

Kampli mohter-son protest
ಪೌತಿ ಖಾತೆ ಹಕ್ಕು ಬದಲಾವಣೆಗೆ ಆಗ್ರಹಿಸಿ ಕಂಪ್ಲಿ ತಹಸಿಲ್ ಕಚೇರಿ ಎದುರು ತಾಯಿ ಈರಮ್ಮ ಮತ್ತು ಮಗ ವೀರನಗೌಡ ಧರಣಿ ಕುಳಿತಿರುವುದು.
Published on

ಕಂಪ್ಲಿ: ಪೌತಿ ಖಾತೆ ಹಕ್ಕು ಬದಲಾವಣೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಪಟ್ಟಣದ ತಹಸಿಲ್ ಕಚೇರಿ ಮುಂದೆ ತಾಯಿ ಮತ್ತು ಮಗ ಮಂಗಳವಾರ ಧರಣಿ ನಡೆಸಿದರು.

ಮೆಟ್ರಿ ಗ್ರಾಮದ ಸರ್ವೇ ನಂಬರ್ 20ರ 11.04 ಸೆಂಟ್ಸ್ ಜಮೀನು ಶಿವಣ್ಣ ಹೆಸರಿನಲ್ಲಿದ್ದು ಇವರು ಮೃತಪಟ್ಟಿದ್ದಾರೆ. ಶಿವಣ್ಣನ ಪತ್ನಿ ಈರಮ್ಮ ತನ್ನ ಹೆಸರಿಗೆ ಹಕ್ಕು ಬದಲಿಸಲು 2025ರ ಜ.6ರಂದು ಅರ್ಜಿ ಸಲ್ಲಿಸಿದ್ದಾರೆ. ಅನೇಕ ಬಾರಿ ಕಚೇರಿಗೆ ಅಲೆದರೂ ಹಕ್ಕು ಬದಲಾವಣೆ ಮಾಡಿಕೊಟ್ಟಿಲ್ಲ. ಈ ಕುರಿತು ಹಿಂಬರಹವನ್ನೂ ನೀಡಿಲ್ಲ ಎಂದು ಈರಮ್ಮ ತನ್ನ ಮಗ ವೀರನಗೌಡನೊಂದಿಗೆ ತಹಸಿಲ್ ಕಚೇರಿ ಮುಂದೆ ಧರಣಿ ಕುಳಿತರು. ಹಕ್ಕು ಬದಲಾವಣೆ ಪ್ರತಿ ಅಥವಾ ಸೂಕ್ತ ಹಿಂಬರಹ ಕೊಡುವ ತನಕ ಧರಣಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.

ತಾಂತ್ರಿಕ ತೊಂದರೆಯಿಂದ ಹಿಂಬರಹ ನೀಡಲು ವಿಳಂಬವಾಗಿದೆ. ಇದೀಗ ಹಿಂಬರಹ ತಯಾರಾಗಿದ್ದು ತಹಸೀಲ್ದಾರ್ ಸಹಿ ಮಾಡಿಸಿ ಜೂ.11ರಂದು ನೀಡಲಾಗುವುದು ಎಂದು ಸಮುಜಾಯಿಷಿ ನೀಡಿದರೂ ಕೇಳದೆ ಹಠದಿಂದ ಧರಣಿ ಕುಳಿತಿದ್ದಾರೆ ಎಂದು ವಿಷಯ ನಿರ್ವಾಹಕ ಮೌನೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net