ದೇವಲಾಪುರದಲ್ಲಿ ಗಣಿತ ಕಲಿಕಾ ಆಂದೋಲನ

Kampli Maths
ದೇವಲಾಪುರ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ ಗಣಿತ ಕಲಿಕಾ ಆಂದೋಲನದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ಪೂಜಾರಿ ಈರಮ್ಮ ರಮೇಶ, ಕುರಿ ನಾಗೇಶ, ಎಚ್.ಹುಲುಗಪ್ಪ, ಎಚ್.ಪಿ.ಸೋಮಶೇಖರ್ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಗ್ರಾಪಂಯಿಂದ ಗುರುವಾರ 4ರಿಂದ 6ನೇ ತರಗತಿ ಮಕ್ಕಳಿಗೆ ಗಣಿತ ಕಲಿಕಾ ಅಂದೋಲನ ನಡೆಯಿತು.

ರೇವಣಸಿದ್ಧ, ಚೈತ್ರಾ, ಭೂಮಿಕಾ, ಎಸ್.ಯಶೋದಾ, ಜಿ.ಅನ್ನಪೂರ್ಣಗೆ ಪ್ರಥಮ ಬಹುಮಾನ 1000 ರೂ. ಹಾಗೂ ಗೌಡ್ರು ಮಾರುತಿ, ಆಸ್ಮಾ ಸಿದ್ದಿಕಾ, ಕೆ.ಅಂಕಿತಾ, ಒಡೆಯರ ಪ್ರಿಯಾಗೆ ದ್ವಿತೀಯ ಬಹುಮಾನವಾಗಿ 600 ರೂ. ಹಾಗೂ ತೃತೀಯ ಸ್ಥಾನ ಪಡೆದ ಕೆ.ಪವಿತ್ರಾ, ಕೆ.ಮಧುಶ್ರೀ, ಅಮೃತಾಗೆ 400 ರೂ. ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.

ಶಿಕ್ಷಣ ಇಲಾಖೆ ವೀಕ್ಷಕ ಎಚ್.ಪಿ.ಸೋಮಶೇಖರ್, ಗ್ರಾಪಂ.ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ, ಎಸ್ ಡಿಎಂಸಿ ಅಧ್ಯಕ್ಷ ಕುರಿ ನಾಗೇಶ, ಗ್ರಾಪಂ.ಕಾರ್ಯದರ್ಶಿ ಎಚ್.ಹುಲುಗಪ್ಪ, ಮತ್ತು ಮುಖ್ಯಶಿಕ್ಷಕರಾದ ಚನ್ನಬಸಮ್ಮ ಶೆಟ್ರು, ಮಲ್ಲಯ್ಯ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net