ಮದ್ರಸಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ವಿತರಣೆ

101022 Kampli Edmilad Note Book Issue
ಈದ್‌ಮಿಲಾದ್ ಪ್ರಯುಕ್ತ ಕಂಪ್ಲಿಯ ಅರೇಬಿಯಾ ಫೈಜಾನೆ ಖಾದ್ರಿಯ ಮದ್ರಸಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ಕಕ, ಲೇಖನಿ ಸಾಮಗ್ರಿ ವಿತರಿಸಲಾಯಿತು.
Published on

ಕಂಪ್ಲಿ: ಇಲ್ಲಿನ 9ನೇ ವಾರ್ಡ್‌ನ ಯಾಸೀನ್ ಮಸೀದಿ ಬಳಿಯ ಅರೇಬಿಯಾ ಫೈಜಾನೆ ಖಾದ್ರಿಯ ಮದ್ರಸಾದ ವಿದ್ಯಾರ್ಥಿಗಳಿಗೆ ಈದ್‌ಮಿಲಾದ್ ಪ್ರಯುಕ್ತ ಭಾನುವಾರ ನೋಟ್‌ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬುದ್ಧ, ಬಸವ, ಅಂಬೇಡ್ಕರ್ ವಾದ) ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ನಂತರ ಮಾತನಾಡಿ, ಬಾಲ್ಯದಲ್ಲೇ ಮಹ್ಮದ್ ಪೈಗಂಬರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಧರ್ಮದ ಆಚಾರ, ತತ್ವ ವಿಚಾರಗಳನ್ನು ಅರಿತು ಪಾಲಿಸಬೇಕು. ಎಲ್ಲರೊಂದಿಗೆ ಪ್ರೀತಿ, ಸ್ನೇಹ ಮತ್ತು ಭಾವೈಕ್ಯದಿಂದ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net