ಎಸ್ಟಿಗೆ ಹೂಗಾರ ಸಮುದಾಯವ ಸೇರಿಸಿ

12092022 Kampli hoogar samavesha
Published on


ಕಂಪ್ಲಿ: ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಸಿಂಧನೂರಿನ ಹೂಗಾರ ಸಮಾಜದ ಕಲ್ಯಾಣ ಕರ್ನಾಟಕ ಸಲಹೆಗಾರ ಅಂಬರೀಷ ಹೂಗಾರ ಒತ್ತಾಯಿಸಿದರು.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಹೂಗಾರ ಸಮಾಜ ಸೇವಾ ಸಂಘ ಹಮ್ಮಿಕೊಂಡಿದ್ದ ಶಿವರಶರಣ ಹೂಗಾರ ಮಾದಣ್ಣನವರ ಜಯಂತ್ಯುತ್ಸವ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ನಾನಾ ಕ್ಷೇತ್ರಗಳಲ್ಲಿ ಸಮುದಾಯವು ಹಿಂದುಳಿದಿದ್ದು ಎಸ್ಟಿ ವರ್ಗಕ್ಕೆ ಸೇರಿಸಬೇಕಿದೆ. ಹೂಗಾರ ಮಾದಣ್ಣನವರ ಜಯಂತ್ಯುತ್ಸವವನ್ನು ಸರ್ಕಾರವೇ ಆಚರಿಸಬೇಕು ಎಂದರು.

ತಾಲೂಕು ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಹೂಗಾರ ರಮೇಶ್ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ರವಿ ಹೂಗಾರ್, ಗಣೇಶ್ ಹೂಗಾರ್, ಅಯ್ಯಪ್ಪ ಹೂಗಾರ್, ಜೀರು ಗಾದಿಲಿಂಗ, ಜೀರು ಶೇಖರಪ್ಪ, ಜೀರು ಬಾಬು, ಜೀರು ದೇವೇಂದ್ರಪ್ಪ, ಮಹೇಂದ್ರ ಹೂಗಾರ್, ಮಲ್ಲಿಕಾರ್ಜುನ ಹೂಗಾರ್, ಬಸವನಗೌಡ ಕುರುಗೋಡ್, ನವೀನ್ ಕುಮಾರ್, ಕುಮಾರ್ ಹೂಗಾರ್, ಜೀರು ವೀರೇಶಪ್ಪ, ಶಂಭುಲಿಂಗಪ್ಪ, ಒಂದುಬಾಗಿಲು ಪಂಪಾಪತಿ, ಡಾಣಾಪುರ ಬಸವರಾಜ್, ಜೀರು ಎರೆಪ್ಪ, ಜೀರು ಈರಪ್ಪ, ಸಂಗಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net