ಹೊಸಪೇಟೆಯಲ್ಲಿ ಯೋಗ, ಧ್ಯಾನ ಶಿಬಿರ ಫೆ.5 ರಿಂದ

05012020 Kampli Yoga Class Conduct
Published on

ಪತಂಜಲಿ ಯೋಗ ಸಮಿತಿಯ ಡಾ.ಎಫ್.ಟಿ.ಹಳ್ಳಿಕೇರಿ ಹೇಳಿಕೆ | ಕರಪತ್ರ ಬಿಡುಗಡೆ

ಕಂಪ್ಲಿ: ಹೊಸಪೇಟೆಯ ವಿಎನ್‌ಸಿ ಕಾಲೇಜು ಹತ್ತಿರದ ತಾಲೂಕು ಕ್ರೀಡಾಂಗಣದಲ್ಲಿ ಫೆ.5 ರಿಂದ ಫೆ.9ರ ವರೆಗೆ ಬೆಳಗ್ಗೆ 5 ರಿಂದ 7.30ರವರೆಗೆ ಹರಿದ್ವಾರದ ಪತಂಜಲಿ ಯೋಗ ಪೀಠದಿಂದ ಯೋಗ ಗುರು ರಾಮದೇವ್ ಗುರುಜೀ ಉಪಸ್ಥಿತಿಯಲ್ಲಿ ಯೋಗ ಚಿಕಿತ್ಸೆ ಮತ್ತು ಧ್ಯಾನ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಡಾ.ಎಫ್.ಟಿ.ಹಳ್ಳಿಕೇರಿ ಹೇಳಿದರು.

ಇಲ್ಲಿನ ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿಯ ಸಂಘಟನಾ ಸಭೆಯಲ್ಲಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಉಸ್ತುವಾರಿ ಸತ್ಯಪ್ಪ, ಸದಸ್ಯರಾದ ವೀರೇಶ್, ಸುಶೀಲಮ್ಮ, ಕಂಪ್ಲಿ ತಾಲೂಕು ಪ್ರಭಾರಿ ಡಿ.ಮೌನೇಶ್, ಕಂಪ್ಲಿ ಘಟಕದ ಅಧ್ಯಕ್ಷ ಟಿ.ಕೊಟ್ರೇಶ್, ಯೋಗ ಸಾಧಕರಾದ ಡಾ.ಜಂಬುನಾಥಗೌಡ್ರು, ನಾಗಪ್ಪ, ಶ್ಯಾಮಲಮ್ಮ, ರತ್ನಮ್ಮ, ಕಿಶೋರ್, ಕೊಟ್ರೇಶ್, ವಿರೂಪಾಕ್ಷಿ, ಭೀಮನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net