ಉನ್ನತ ಹುದ್ದೆಯತ್ತ ಗಮನಹರಿಸಿ- ವಿದ್ಯಾರ್ಥಿಗಳಿಗೆ ಶಾಸಕ ಜೆ.ಎನ್.ಗಣೇಶ್ ಸಲಹೆ

060123 Kampli Degree Culture Program of PU College
ಕಂಪ್ಲಿಯ ಮಹಿಳಾ ಮಹಾವಿದ್ಯಾಲಯ ಹಾಗೂ ಮದರ್ ತೆರೇಸಾ ಪ.ಪೂ.ಕಾಲೇಜು ಆಯೋಜಿಸಿದ್ದ ಸಾಂಸ್ಕೃತಿಕ ಸಮಾರಂಭದಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.
Published on

ಕಂಪ್ಲಿ: ವಿದ್ಯಾರ್ಥಿಗಳು ಪಾಲಕರ ಸಂಕಲ್ಪ ಅರಿತು ಉನ್ನತ ಹುದ್ದೆಯತ್ತ ಗಮನಹರಿಸಿ, ಜಾಗೃತರಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಸಲಹೆ ನೀಡಿದರು.

ವಿವಿಎಸ್‌ಎಸ್ ಟ್ರಸ್ಟ್‌ನ ಮಹಿಳಾ ಮಹಾವಿದ್ಯಾಲಯ, ಮದರ್ ತೆರೇಸಾ ಪ.ಪೂ.ಕಾಲೇಜು ಏರ್ಪಡಿಸಿದ್ದ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರವಿರಬೇಕು. ಉದ್ದೇಶಿತ ಗುರಿ ಸಾಧನೆಗೆ ಹಾತೊರೆಯಬೇಕು. ಪಾಲಕರು, ಶಿಕ್ಷಕರು, ಕಲಿತ ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ ಮಾತನಾಡಿ,ಓದುವ ಸಮಯದಲ್ಲಿ ಅನ್ಯ ವಿಷಯಗಳತ್ತ ಗಮನ ನೀಡಬಾರದು. ಉತ್ತಮವಾಗಿ ಅಭ್ಯಾಸ ಮಾಡಬೇಕು. ಉನ್ನತ ಗುರಿಯತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಕೆಎಎಸ್‌ನಲ್ಲಿ ಸಾಧನೆ ಮಾಡಿದ ನಂದಿನಿ ಗರಡಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ, ಪುರಸಭಾಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ಸದಸ್ಯರಾದ ಎನ್.ರಾಮಾಂಜನೇಯುಲು, ವೀರಾಂಜನೇಯ, ಬಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎನ್.ಬಾಲಪ್ಪ, ಟ್ರಸ್ಟ್‌ನ ಪ್ರಮುಖರಾದ ರಾವಿ ರಾಜಶೇಖರ, ಜೆ.ನಾಗಯ್ಯ, ಮದ್ದಾನಪ್ಪ, ಜಿ.ಪ್ರಕಾಶನಾಯಕ, ಮಂಜುನಾಥ ತಳವಾರ, ವಿ.ಬಸವರಾಜ, ಪ್ರಾಚಾರ್ಯರಾದ ಜಿ.ಮಹಾಬಲೇಶ್ವರಪ್ಪ, ಡಾ.ಅನ್ನಪೂರ್ಣ ಗಡುದೂರು, ಮದ್ದಾನೆಪ್ಪ ಬಿಡನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net