ಆರೋಗ್ಯ ಇಲಾಖೆ ಯೋಜನೆಗಳ ತಿಳಿಯಿರಿ - ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ

KAMPLI 06
ಹಳೆನೆಲ್ಲೂಡಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಗ್ರಾಪಂ.ಸದಸ್ಯೆ ರುದ್ರಮ್ಮ ಚಾಲನೆ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ವಿಘ್ನೇಶ್, ಸುರಕ್ಷಣಾಧಿಕಾರಿ ಎನ್.ಕೆ.ನಂದಾ, ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ, ಆಶಾ ಕಾರ್ಯಕರ್ತೆ ಅನ್ನಪೂರ್ಣ, ಕಲಾತಂಡದ ಪ್ರಮುಖ ವೀರೇಶ್ ದಳವಾಯಿ ಇತರರಿದ್ದರು.
Published on

ಕಂಪ್ಲಿ: ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.

ಹಳೆನೆಲ್ಲೂಡಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಗ್ರಾಮಸ್ಥರು ಆರೋಗ್ಯ ಇಲಾಖೆಯ ಯೋಜನೆಗಳನ್ನು ಅರಿತುಕೊಳ್ಳಬೇಕು ಎಂದರು. ಗ್ರಾಪಂ.ಸದಸ್ಯೆ ರುದ್ರಮ್ಮ ಹಲಗೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹದಿಹರೆಯದವರ ಸಮಸ್ಯೆ, ಪೌಷ್ಟಿಕ ಆಹಾರ, ಎದೆ ಹಾಲಿನ ಮಹತ್ವ, 108, ಹಕ್ಕಿ ಜ್ವರ, ಬಿಸಿಲ ತಾಪದ ಮುಂಜಾಗ್ರತೆ ಕ್ರಮ ಸೇರಿದಂತೆ ನಾನಾ ಯೋಜನೆಗಳ ಕುರಿತು ಸಿರಗುಪ್ಪದ ನೇತ್ರ ಕಲಾ ಸಂಘ ಜನಪದ ಕಲಾತಂಡದದಿಂದ ಹಾಡು, ಅಭಿನಯ ಮೂಲಕ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net