ಅತಿಥಿ ಉಪನ್ಯಾಸಕರಿಗೆ ಸರ್ಕಾರ ಸೇವಾ ಭದ್ರತೆ ಒದಗಿಸಲಿ; ಶಾಸಕ ಗಣೇಶ್‌ಗೆ ಹೋರಾಟ ಸಮಿತಿ ಮನವಿ

28082020 Kampli guest lecture appele
Published on

ಕಂಪ್ಲಿ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ಗುರುವಾರ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿತು.

ಜಿಲ್ಲಾ ಸಂಯೋಜಕ ಎಚ್.ಎರ‌್ರಿಸ್ವಾಮಿ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ 2020ರ ಮಾರ್ಚ್ 24ರಿಂದ ಈವರೆಗೆ ಸಂಬಳ ನೀಡಿಲ್ಲ. ಸರ್ಕಾರ ಬಾಕಿ ವೇತನ ಕೂಡಲೇ ಬಿಡುಗಡೆಗೊಳಿಸಬೇಕು. ಲಾಕ್‌ಡೌನ್ ರಜೆ ಅವಧಿಯನ್ನು ಕೆಲಸದ ಅವಧಿಯೆಂದು ಪರಿಗಣಿಸಿ ಸಂಬಳ ನೀಡಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿ ನಗರ ಸಂಯೋಜಕ ಜಗದೀಶ ನೇಮಕಲ್, ಅತಿಥಿ ಉಪನ್ಯಾಕರಾದ ಕೆ.ಶಿವಕುಮಾರ್, ಕೆ.ಕುಮಾರ್, ಗಜೇಂದ್ರ, ಸಿ.ಡಿ.ಕುಮಾರ್, ಬಿ.ಸುರೇಶ್, ಆನಂದಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net