ಪದವೀಧರರು ನ.6ರೊಳಗೆ ಅರ್ಜಿ ಸಲ್ಲಿಸಿ

Kampli election meet
ಕಂಪ್ಲಿಯಲ್ಲಿ ಏರ್ಪಡಿಸಿದ್ದ ಸ್ವೀಪ್ ಸಮಿತಿ ಸದಸ್ಯರ ಜಾಗೃತಿ ಸಭೆಯಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿದರು. ಪುರಸಭೆ ಸಿಒ ಕೆ.ದುರುಗಣ್ಣ ಇದ್ದಾರೆ.
Published on

ಕಂಪ್ಲಿ: ಮುಂದಿನ ವರ್ಷ ನಡೆಯಲಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿಗೆ ಪದವೀಧರರು ಹೆಸರು ನೋಂದಾಯಿಸಲು ಫಾರ್ಮ್ ನಂ.18 ಭರ್ತಿ ಮಾಡಿ ನ.6ರೊಳಗೆ ಸಲ್ಲಿಸಬೇಕು ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವೀಪ್ ಸಮಿತಿ ಸದಸ್ಯರ ಜಾಗೃತಿ ಸಭೆಯಲ್ಲಿ ಮಾತನಾಡಿದರು. 2020ರ ನ.6ರೊಳಗೆ ಪದವಿ ತೇರ್ಗಡೆ ಹೊಂದಿದವರು ಫಾರ್ಮ್ ನಂ.18 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಹಸಿಲ್ ಕಚೇರಿಗೆ ಸಲ್ಲಿಸಬೇಕು. ಈ ಕುರಿತು ಪುರಸಭೆ, ಗ್ರಾಪಂಗಳು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಪುರಸಭೆ ಸಿಒ ಕೆ.ದುರುಗಣ್ಣ, ಕೃಷಿ ಅಧಿಕಾರಿ ಶ್ರೀಧರ್, ಇಸಿಒ ಜಿ.ವೀರೇಶ್, ಶಾಲೆ ಕಾಲೇಜುಗಳ ಮುಖ್ಯಸ್ಥರಾದ ಮಹ್ಮದ್ ಶಫಿ, ಎಚ್.ಚಂದ್ರಶೇಖರ್, ಜಿ.ಪ್ರವೀಣ್‌ಕುಮಾರ್, ಟಿ.ಎಂ.ಬಸವರಾಜ, ತಾರಾ ನಂದ್ಯಾಳ್, ತ್ರಿವೇಣಿ, ಎಚ್.ದೊಡ್ಡಬಸಪ್ಪ, ಶಿವಕುಮಾರ್, ಶಿವ ಬಸವನಗೌಡ, ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net