ವರ್ಗಾವಣೆಗೊಂಡ ಶಿಕ್ಷಕಿಯರಿಂದ ಮಾದರಿ ಕಾರ್ಯ

TEACHER
ದೇವಲಾಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕಿಯರಾದ ಅನುಪಮಾ, ಎನ್.ಭುವನೇಶ್ವರಿ, ಎಂ.ಅನ್ನಪೂರ್ಣದೇವಿ, ಜಿ.ಶಾರದಾ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಪ್ರಮುಖರಾದ ಜಾನೂರು ವೈಕುಂಠ, ಪವಾಡಿ ರೇಣುಕಮ್ಮ ಗೌರಣ್ಣ, ಎಚ್.ಪಿ.ಸೋಮಶೇಖರ್, ಜಿ.ಶುಭಾ, ಎಂ.ಎ.ನಾಗನಗೌಡ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರ್ಗಾವಣೆಗೊಂಡ ನಾಲ್ವರು ಶಿಕ್ಷಕಿಯರು, 40 ಸಾವಿರ ರೂ. ವೆಚ್ಚದಲ್ಲಿ ಮುಖ್ಯಶಿಕ್ಷಕರ ಕೊಠಡಿಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಿ ಮಾದರಿಯಾಗಿದ್ದಾರೆ.

ಶಿಕ್ಷಕಿಯರಾದ ಅನುಪಮಾ, ಎನ್.ಭುವನೇಶ್ವರಿ ತಲಾ 15 ಸಾವಿರ ರೂ., ಎಂ.ಅನ್ನಪೂರ್ಣದೇವಿ ಹಾಗೂ ಜಿ.ಶಾರದಾ ತಲಾ 5 ಸಾವಿರ ರೂ. ದೇಣಿಗೆಯಿಂದ ಕೋಣೆಗೆ ಸುಣ್ಣ ಬಣ್ಣ, ಟೇಬಲ್, ಗ್ಲಾಸ್, ಕುರ್ಚಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಿಕ್ಷಕಿಯರನ್ನು ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು ಹಾಗೂ ವಿದ್ಯಾರ್ಥಿಗಳು ಗೌರವಿಸಿ ಬುಧವಾರ ಬೀಳ್ಕೊಟ್ಟರು. ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ನಾಗನಗೌಡ, ತಾಲೂಕು ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ದೊಡ್ಡಬಸಪ್ಪ, ಎಸ್ಡಿಎಂಸಿ ಅಧ್ಯಕ್ಷ ಜಾನೂರು ವೈಕುಂಠ, ಉಪಾಧ್ಯಕ್ಷೆ ಪವಾಡಿ ರೇಣುಕಮ್ಮ ಗೌರಣ್ಣ, ಮುಖ್ಯ ಶಿಕ್ಷಕರಾದ ಎಚ್.ಪಿ.ಸೋಮಶೇಖರ್, ಜಿ.ಶುಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net