

ಕಂಪ್ಲಿ: ಸಮುದಾಯದ ಜನರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಬಳಸಿಕೊಳ್ಳುವಲ್ಲಿ ಜಾಗೃತಿ ತೋರಬೇಕಿದೆ ಎಂದು ಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್ವರರಾವ್ ಹೇಳಿದರು.
ತಾಲೂಕಿನ ನಂ.10ಮುದ್ದಾಪುರ ಗ್ರಾಮದ ರಂಗನಾಥ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಒಳಪಂಗಡ, ಭಿನ್ನಾಭಿಪ್ರಾಯಗಳಿದ್ದರೂ ಮರೆತು ಸಂಘಟಿತರಾಗಬೇಕು. ಕುಲಾಭಿಮಾನ ಬೆಳೆಸಿಕೊಂಡು ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿ ಸಾಧಿಸಬೇಕಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಬಳ್ಳಾರಿ ಮಾಧವ ಮಾತನಾಡಿ, ಗೊಲ್ಲರ ಸಂಘಕ್ಕೆ ನಿವೇಶನ ಪಡೆದುಕೊಳ್ಳಬೇಕಿದೆ. ಸಂಘದ ಸದಸ್ಯರ ಸಂಖ್ಯೆ ಹೆಚ್ಚಿಸಿ ಗ್ರಾಮೀಣ ಪ್ರದೇಶಗಳಲ್ಲೂ ಸಮುದಾಯವನ್ನು ಸಂಘಟಿಸಿ ಬಲವರ್ಧನೆಗೊಳಿಸಬೇಕಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೆಟ್ರಿಯ ತತ್ವಪದಕಾರ ಚನ್ನದಾಸರ ಸಣ್ಣ ದುರುಗಪ್ಪ, ಗ್ರಾಪಂ ಅಧ್ಯಕ್ಷೆ ವಿಪ್ರದ ಲಕ್ಷ್ಮೀದೇವಿ ಭೀಮೇಶ್, ಬಳ್ಳಾರಿ ಮಾಧವ, ಮೆಟ್ರಿ ಜಯಲಕ್ಷ್ಮೀ, ಬುರೆ ಶೇಖರ್, ವಿಠ್ಠಲಾಪುರ ಶಿವಕಾಂತಮ್ಮ, ಕಣ್ವಿ ತಿಮ್ಮಲಾಪುರ ಮಹಾದೇವ, ಗೌರಮ್ಮ, ನವಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಬುರೆ ವಿರೂಪಾಕ್ಷಿ, ಗೊಲ್ಲರ ಜಿಲ್ಲಾ ಸಂಘದ ಸದಸ್ಯ ಎಸ್.ಗೋಪಾಲರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ಬಿ.ನಾಗರಾಜ, ಸಂಜೀವರಾಯುಡು, ಎ.ಮಹೇಶ್, ವಿ.ನಾರಾಯಣಪ್ಪ, ಜಿ.ದೊಡ್ಡ ಯರ‌್ರಿಸ್ವಾಮಿ, ಎಂ.ಈಶ್ವರಪ್ಪ, ಜಿ.ಜಡೇಗೌಡ ಇತರರಿದ್ದರು.