ಗೋಶಾಲೆಗೆ ಸಾಗುವಳಿ ಭೂಮಿ ನೀಡದಿರಿ: ಭೂಮಿ ವಸತಿ ಹೋರಾಟ ಸಮಿತಿ ಆಗ್ರಹ

Kampli Goshale
ಕಂಪ್ಲಿಯಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಂಗೆ ಭೂಮಿ ವಸತಿ ಹೋರಾಟ ಸಮಿತಿ ಮನವಿ ಸಲ್ಲಿಸಿತು. ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ, ಮುಖಂಡರಾದ ಬಿ.ಗಂಗಾಧರ, ಕೆ.ದೊಡ್ಡಬಸಪ್ಪ, ಎಂ.ಹನುಮಂತ, ಆನೆ ಪಕ್ಕೀರಪ್ಪ ಇತರರಿದ್ದರು.
Published on

ಕಂಪ್ಲಿ: ರಾಮಸಾಗರ ಗ್ರಾಮದ ಮಾನಸ ಗಂಗೋತ್ರಿ ಸೇವಾ ಟ್ರಸ್ಟ್‌ಗೆ ಗೋಶಾಲೆ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ಮಂಜೂರು ಮಾಡಬಾರದು ಎಂದು ಭೂಮಿ ವಸತಿ ಹೋರಾಟ ಸಮಿತಿ ಶುಕ್ರವಾರ ತಹಸೀಲ್ದಾರ್ ಗೌಸಿಯಾ ಬೇಗಂಗೆ ಮನವಿ ಸಲ್ಲಿಸಿತು.

ರಾಜ್ಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ರಾಮಸಾಗರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳ ಸರ್ಕಾರಿ ಭೂಮಿಯಲ್ಲಿ ವಿವಿಧ ಸಮುದಾಯದವರು ಐದಾರು ದಶಕಗಳಿಂದ ಬೇಸಾಯ ಮಾಡಿಕೊಂಡಿದ್ದಾರೆ. ಉಳುಮೆ ಮಾಡುವ ರೈತರು ಅಕ್ರಮ ಸಕ್ರಮಕ್ಕಾಗಿ ಕಂದಾಯ ಇಲಾಖೆಗೆ ನಮೂನೆ 57 ಅನ್ನು ಸಲ್ಲಿಸಿದ್ದಾರೆ.

ಗೋಶಾಲೆಗೆ ನೀಡಿದಲ್ಲಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಅನ್ಯಾಯವಾಗುತ್ತದೆ. ಬಗರ್‌ಹುಕುಂ ಸಾಗುವಳಿ ಸಭೆ ನಡೆಸಿ ರೈತರಿಗೆ ಪಟ್ಟಾ ನೀಡಬೇಕು. ಗೋಶಾಲೆಗೆ ಜಮೀನು ಮಂಜೂರು ಮಾಡಬಾರದು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಬಿ.ಗಂಗಾಧರ, ಕೆ.ದೊಡ್ಡಬಸಪ್ಪ, ಎಂ.ಹನುಮಂತ, ಆನೆ ಪಕ್ಕೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net