ಜ್ಞಾನಾನಂದಗಿರಿ ಶ್ರೀಗಳ ಜನ್ಮದಿನೋತ್ಸವ

010222 Kampli Gñānānandagiri śrī Birthday
ತೊಗಟವೀರ ಕ್ಷತ್ರಿಯ ನೇಕಾರ ಸಮುದಾಯದ ಕುಲಗುರು ದಿವ್ಯ ಜ್ಞಾನಾನಂದಗಿರಿ ಶ್ರೀಗಳ ಜನ್ಮದಿನೋತ್ಸವ ನಿಮಿತ್ತ ಕಂಪ್ಲಿಯ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಮಂಗಳವಾರ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು.
Published on

ಕಂಪ್ಲಿ: ತೊಗಟವೀರ ಕ್ಷತ್ರಿಯ ಸಮುದಾಯದವರು ವೈಯಕ್ತಿಕ ಮತ್ತು ಸಾಮುದಾಯಿಕ ಏಳಿಗೆಗೆ, ಕುಲಗುರು ದಿವ್ಯ ಜ್ಞಾನಾನಂದಗಿರಿ ಮಹಾಸ್ವಾಮೀಜಿ ತತ್ವ ಸಂದೇಶಗಳನ್ನು ಪಾಲಿಸುವಲ್ಲಿ ಮುಂದಾಗಬೇಕು ಎಂದು ನೇಕಾರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ದೇವಾನಂದ್ ಹೇಳಿದರು.

ಇಲ್ಲಿನ ತೊಗಟವೀರ ಕ್ಷತ್ರಿಯ ನೇಕಾರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತೊಗಟವೀರ ಕ್ಷತ್ರಿಯ ನೇಕಾರ ಸಮುದಾಯದ ಕುಲಗುರು ತಪಸ್ವಿಹಳ್ಳಿಯ ದಿವ್ಯ ಜ್ಞಾನಾನಂದಗಿರಿ ಶ್ರೀಗಳ 36ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ನೇಕಾರ ಸಮುದಾಯದವರು ಸಂಘಟಿತರಾಗಬೇಕಿದೆ ಎಂದರು.

ಇದೇ ವೇಳೆ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ, ತೊಗಟವೀರ ಕ್ಷತ್ರಿಯ ನೇಕಾರ ಸಂಘದ ತಾಲೂಕು ಅಧ್ಯಕ್ಷ ಎಂ.ವೆಂಕಟಕೊಂಡಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net