ಜೆಸ್ಕಾಂ ಉಪ ವಿಭಾಗ ಕಚೇರಿ ಆರಂಭ

Kampli Gescom
ಜಿ.ಎನ್.ಮಲ್ಲಿಕಾರ್ಜುನ
Published on

ಕಂಪ್ಲಿ: ಪಟ್ಟಣದಲ್ಲಿ ಜೆಸ್ಕಾಂ ಉಪ ವಿಭಾಗ ಕಚೇರಿ ಶುಕ್ರವಾರ ಆರಂಭಗೊಂಡಿದ್ದು, ಎಇಇ ಜಿ.ಎನ್.ಮಲ್ಲಿಕಾರ್ಜುನ ಗೌಡ ಅಧಿಕಾರ ಸ್ವೀಕರಿಸಿದರು.

ಕಂಪ್ಲಿ ನಗರ, ಗ್ರಾಮೀಣ ಮತ್ತು ಮೆಟ್ರಿ ಕಾರ್ಯ ಮತ್ತು ಪಾಲನಾ ಶಾಖೆ ಒಳಗೊಂಡಂತೆ, ಕಂಪ್ಲಿ ಶಾಖೆಯನ್ನು ಉನ್ನತೀಕರಿಸಿ ಉಪ ವಿಭಾಗ ಕಚೇರಿ ಆರಂಭಿಸಲಾಗಿದೆ.

ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಕಂಪ್ಲಿ ತಾಲೂಕು ಒಳಪಡುವುದರಿಂದ ವಿಜಯನಗರ ಜಿಲ್ಲೆ ಹೊಸಪೇಟೆಯ ಗ್ರಾಮೀಣ ಉಪವಿಭಾಗದಿಂದ ಬೇರ್ಪಡಿಸಿ, ಬಳ್ಳಾರಿಯ ಆಡಳಿತಾತ್ಮಕ ನಿಯಂತ್ರದಲ್ಲಿ ಕಾರ್ಯನಿರ್ವಹಿಸಲು ಕಂಪ್ಲಿ ಉಪ ವಿಭಾಗ ಸೇರ್ಪಡೆಗೊಳಿಸಿದೆ.

ಉಪ ವಿಭಾಗ ಕಚೇರಿ ಪಟ್ಟಣದಲ್ಲಿಯೇ ಆರಂಭವಾಗಿದ್ದರಿಂದ ಗುತ್ತಿಗೆದಾರರು, ರೈತರು, ಗ್ರಾಹಕರಿಗೆ ಅನುಕೂಲವಾಗಿದೆ. ಉಪ ವಿಭಾಗದ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಎಇಇ ಜಿ.ಎನ್.ಮಲ್ಲಿಕಾರ್ಜುನಗೌಡ ತಿಳಿಸಿದರು. ಎಇ ವಿನೋದ್‌ಕುಮಾರ್ ಬ್ಯಾಲಾಳ್, ಭೀಮೇಶ್, ಜೆಇ ಮಹಾಂತೇಶ ತುಂಬಳದ, ಸಮೀವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net