ಉನ್ನತೀಕರಿಸಿದ ಕಚೇರಿಗೆ ನಾಮಫಲಕ

kmp=1
ಕಂಪ್ಲಿ ಜೆಸ್ಕಾಂ ಉಪ ವಿಭಾಗ ಕಚೇರಿಗೆ ಬರೆಸಲಾದ ನಾಮಫಲಕದ ನೋಟ.
Published on

ಕಂಪ್ಲಿ: ಇಲ್ಲಿನ ಜೆಸ್ಕಾಂ ಉಪವಿಭಾಗ ಕಚೇರಿಯಲ್ಲಿದ್ದ ಸಹಾಯಕ ಇಂಜಿನಿಯರ್(ವಿ) ಕಚೇರಿ ಕಾರ್ಯ ಮತ್ತು ಪಾಲನಾ ಶಾಖೆಯ ನಾಮಫಲಕ ಬದಲಿಸಿ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿ., ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಂಪ್ಲಿ ಎಂದು ಶನಿವಾರ ಬರೆಸಲಾಗಿದೆ.

(ವಿಜಯವಾಣಿ ಫಲಶೃತಿ)

2024ರ ಆ. 9ರಂದು ಜೆಸ್ಕಾಂ ಶಾಖೆಯನ್ನು ಜೆಸ್ಕಾಂ ಉಪ ವಿಭಾಗ ಕಚೇರಿಯನ್ನಾಗಿ ಉನ್ನತೀಕರಿಸಲಾಗಿತ್ತು. 13 ತಿಂಗಳಾದರೂ ಉನ್ನತೀಕರಿಸಿದ ಕಚೇರಿ ನಾಮಫಲಕ ಬರೆಸಿರಲಿಲ್ಲ.

2025ರ ಸೆ.18ರಂದು ಹೊಸ ನಾಮಫಲಕ ಅಳವಡಿಕೆ ಭಾಗ್ಯಎಂದು? ಎಂಬ ಶೀರ್ಷಿಕೆಯಡಿ ವಿಜಯವಾಣಿ ಸುದ್ದಿ ಬಿತ್ತರಿಸಿತ್ತು. ಎಚ್ಚೆತ್ತ ಅಧಿಕಾರಿಗಳು ನಾಮಫಲಕ ಬದಲಿಸುವ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net