

ಪಿ.ಹನುಮಂತರಾಯಡು ಗದ್ದೆ ಮೂಲಕ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ಸರ್ವೇ ಗುರುತು.
ಕಂಪ್ಲಿ: ಗಂಗಾವತಿ-ದರೋಜಿ ಮಧ್ಯೆ ಬ್ರಾಡ್‌ಗೇಜ್ ಸಂಪರ್ಕಕ್ಕಾಗಿ ಪಟ್ಟಣದ ಹೊರವಲಯದಲ್ಲಿ ಸರ್ವೇ ನಡೆಸಿ ಹಲವು ಕಡೆ ಗುರುತು ಹಾಕಿದ್ದು, ಕುತೂಹಲ ಮೂಡಿಸಿದೆ.
ಇದನ್ನೂ ಓದಿರಿ:
ಗಂಗಾವತಿ-ದರೋಜಿ ಮಧ್ಯೆ 36 ಕಿಮೀ ಅಂತರದ ಬ್ರಾಡ್‌ಗೇಜ್ ಸಂಪರ್ಕ ಕಲ್ಪಿಸಲು ದಕ್ಷಿಣ ಪಶ್ಚಿಮ ರೈಲ್ವೆ ಸರ್ವೇ ನಡೆಸುತ್ತಿದೆ. ಇದಕ್ಕಾಗಿ ಕಂಪ್ಲಿಯ ಹೇರೂರು ವಿರುಪಣ್ಣ ತಾತನ ಮಠದಿಂದ ಸರ್ವೇ ಸಾಗಿ ಬೆಳಗೋಡ್ ಹಾಳ್ ಗ್ರಾಮಕ್ಕೆ ತೆರಳುವ ಪಾಂಡುರಂಗ ಮತ್ತು ಗಾಳೆಮ್ಮ ಗುಡಿ ಮಧ್ಯದಲ್ಲಿ ಬಲಗಡೆ ಎ.16, ಅರಳಿಹಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಬೆಣ್ಣೆ ಮಿಲ್ ಬಳಿ ರಸ್ತೆ ಮೇಲೆ ಎ.17ನ್ನು, ಪೆನಕಲಪಾಟಿ ಹನುಮಂತರಾಯುಡು ಗದ್ದೆ ಸರ್ವೇ ನಂ.1383ಬಿ/ಡಿ ಮೂಲಕ ಎ.19ಹಾದು ಹೋಗಿದೆ. ಕೊಟ್ಟಾಲ್ ಪೆಟ್ರೋಲ್ ಬಂಕ್ ಬಳಿ ಸ್ಟೇಷನ್ ನಿರ್ಮಿಸಲಿದ್ದು, ಜಾಯಿಗನೂರು ಮೂಲಕ ಮುಂದೆ ಸಮೀಕ್ಷೆ ಸಾಗಿದೆ.
ಗಂಗಾವತಿ ದರೋಜಿ ಮಧ್ಯದ ಬ್ರಾಡ್‌ಗೇಜ್ ಸಂಪರ್ಕ ಕಂಪ್ಲಿ ಮೂಲಕ ಹಾದು ಹೋಗುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಸರ್ವೇ ಕಾರ್ಯ ಆರಂಭಿಸಿದ್ದು ತುರ್ತಾಗಿ ಮುಗಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಆಗ್ರಹಿಸಿದ್ದಾರೆ. 5 ಸರ್ವೇ ನಡೆಯಲಿದ್ದು, ಈಗಾಗಲೇ ಡ್ರೋನ್ ಕ್ಯಾಮರಾ ಮೂಲಕ ಸರ್ವೇ ನಡೆಸಿದೆ. ಈ ಸರ್ವೇ 2022ರ ಆ.18ರೊಳಗೆ ಮುಗಿಯಬೇಕಿತ್ತು. ನಾನಾ ಕಾರಣಗಳಿಂದ ವಿಳಂಬವಾಗಿದ್ದು ಸರ್ವೇ ಮುಗಿಸಬೇಕು ಎಂದು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಅಶೋಕಸ್ವಾಮಿ ಹೇರೂರು ಒತ್ತಾಯಿಸಿದ್ದಾರೆ.