ಕಂಪ್ಲಿ ಕೋಟೆ ಸ್ಮಶಾನದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಬೇಡ: ಬಹುಜನ ಸಮಾಜ ಪಾರ್ಟಿ ಮುಖಂಡರ ಒತ್ತಾಯ

Kampli Bahujan Samaja party Appeal
ಕಂಪ್ಲಿಯಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಂಗೆ ಬಹುಜನ ಸಮಾಜ ಪಾರ್ಟಿಯಿಂದ ಮನವಿ ಸಲ್ಲಿಸಲಾಯಿತು.
Published on

ಕಂಪ್ಲಿ: ಕೋಟೆಯ ತುಂಗಭದ್ರಾ ನದಿ ತಟದಲ್ಲಿನ ಸ್ಮಶಾನದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಶುಕ್ರವಾರ ತಹಸೀಲ್ದಾರ್ ಗೌಸಿಯಾ ಬೇಗಂಗೆ ಮನವಿ ಸಲ್ಲಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಣ್ಣೂರು ನಾಗರಾಜ ಮಾತನಾಡಿ,ನದಿ ತಟದಲ್ಲಿನ ಸ್ಮಶಾನದಲ್ಲಿ ಬೇರೆ ತಾಲೂಕು, ಗ್ರಾಮಗಳ ಕರೊನಾ ಸೋಂಕಿತರ ಶವಗಳ ಅಂತ್ಯಕ್ರಿಯೆಯನ್ನು ಬೇಕಾಬಿಟ್ಟಿ ಮಾಡಲಾಗುತ್ತಿದೆ. ಅರೆಬೆಂದ ಶವಗಳನ್ನು ನಾಯಿಗಳು ಕಚ್ಚಿ ಜನವಸತಿ ಪ್ರದೇಶಗಳತ್ತ ತರುತ್ತಿವೆ. ಇದರಿಂದ ಸ್ಮಶಾನ ಸಮೀಪದ ಮನೆಗಳವರಿಗೆ ದುರ್ನಾತದ ಜತೆಗೆ ಕರೊನಾ ಶವಗಳ ಅಂತ್ಯಸಂಸ್ಕಾರದಿಂದ ಆತಂಕ ಉಂಟಾಗಿದೆ. ಕೋಟೆಯ ಸ್ಮಶಾನದಲ್ಲಿ ಸಂಬಂಧಿಸಿದ ಕುಟುಂಬಗಳು ಮಾತ್ರ ಅಂತ್ಯಸಂಸ್ಕಾರ ಮಾಡಬೇಕು.ಬೇರೆಯ ಶವಗಳನ್ನು ತಂದಲ್ಲಿ ಕೋಟೆಯ ಜನತೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪ್ರಮುಖರಾದ ಶೆರೆಗಾರ ನಾಗರಾಜ್, ಕೋಟೆಮೇಗಳ ಹನುಮಂತಪ್ಪ, ಅದ್ದಪ್ಪ ನಾಗಲಾರೆಪ್ಪ, ಕಂಬತ್ ಕೃಷ್ಣ, ಲಡ್ಡು ಹೊನ್ನೂರವಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net