ನಮೂನೆ-3 ವಿತರಿಸುವ ಕನಸು ನನಸು

Kampli form 3 distributor
ಕಂಪ್ಲಿ ಇಂದಿರಾನಗರದ ನಿವಾಸಿಗಳಿಗೆ ನಮೂನೆ-3 ಪತ್ರ ವಿತರಿಸಲಾಯಿತು. ಶಾಸಕ ಜೆ.ಎನ್.ಗಣೇಶ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸದಸ್ಯರಾದ ಸುಮಾ ರಾಘವೇಂದ್ರ, ಸಿ.ಆರ್.ಹನುಮಂತ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ 5ನೇ ವಾರ್ಡ್ ಇಂದಿರಾನಗರದ 92 ಮನೆಗಳ ಪಟ್ಟಾದಾರರಿಗೆ ಪುರಸಭೆಯಿಂದ ನಮೂನೆ-3 ವಿತರಿಸಲಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.

ಇಂದಿರಾನಗರದಲ್ಲಿ ಬುಧವಾರ ನಮೂನೆ-3 ವಿತರಿಸಿ ಮಾತನಾಡಿ, ಬಹು ವರ್ಷಗಳ ಕನಸು ನನಸಾಗಿದೆ.ಇಲ್ಲಿನ ಜನರಿಗೆ ಮೊದಲಿಗೆ ಪಟ್ಟಾ ವಿತರಿಸಿದ್ದು, ಇದೀಗ ನಮೂನೆ-3 ವಿತರಿಸುವಲ್ಲಿ ಪುರಸಭೆ ಸದಸ್ಯೆ ಸುಮಾ ರಾಘವೇಂದ್ರರ ಪಾತ್ರ ಪ್ರಮುಖವಾಗಿದೆ. ಇವರ ಸಾಮಾಜಿಕ ಕಳಕಳಿ ಮೆಚ್ಚಿ ಪುರಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡಲಾಗುವುದು ಎಂದರು.

ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಇ-ಕಚೇರಿ ವ್ಯವಸ್ಥೆ ಮೂಲಕ ಸಕಾಲದಲ್ಲಿ ಪುರಸಭೆಯಿಂದ ದೊರಕುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಅರ್ಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ಸುಮಾ ರಾಘವೇಂದ್ರ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಪ್ರಮುಖರಾದ ಬಿ.ಶೆಕ್ಷಾವಲಿ, ಕೆ.ಮಸ್ತಾನ್‌ವಲಿ, ಗೋಪಾಲ, ಆಟೋ ರಾಘವೇಂದ್ರ, ಜಿ.ಸುಧಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net