ಬಿಜೆಪಿ ಪೇಜ್ ಪ್ರಮುಖರ ಸಭೆ

110223 Kampli BJP Meeting
ಕಂಪ್ಲಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಮಾತನಾಡಿದರು.
Published on

ಕಂಪ್ಲಿ: ಪಟ್ಟಣದ ಸತ್ಯನಾರಾಯಣಪೇಟೆ ಸಹಿಪ್ರಾ ಶಾಲೆ ಮೈದಾನದಲ್ಲಿ ಫೆ.13ರ ಸಂಜೆ ಪೇಜ್‌ಪ್ರಮುಖರ ಸಂಕಲ್ಪ ಸಭೆ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಹೇಳಿದರು.

ಶನಿವಾರ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿ, ಪಕ್ಷದ ಬಲವರ್ಧನೆ, ಕಾರ್ಯಕರ್ತರ ಸಂಘಟನೆ, ಉಭಯ ಸರ್ಕಾರಗಳ ಸಾಧನೆಗಳನ್ನು ತಿಳಿಸಲು ಸಭೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ, ಬಿ.ಎಸ್.ಆನಂದಸಿಂಗ್, ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, ಬಜೆಟ್ ನಂತರ ಬಸವಕಲ್ಯಾಣದಿಂದ ಬಿಜೆಪಿ ವಿಜಯಸಂಕಲ್ಪ ಯಾತ್ರೆ ಆರಂಭಗೊಳ್ಳಲಿದ್ದು, ಪಟ್ಟಣಕ್ಕೂ ಆಗಮಿಸಲಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮೋರ್ಚಾ ಸಮಾವೇಶ ಜರುಗಲಿದೆ. ಶಾಸಕ ಜೆ.ಎನ್.ಗಣೇಶ್ ಹೊಸ ಅನುದಾನ ತರದೆ ಹಿಂದಿನ ಅವಧಿಯ ಅನುದಾನಗಳಿಗೆ ಭೂಮಿಪೂಜೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಮುಖರಾದ ಅನಿಲ್‌ನಾಯ್ಡು, ಅಶೋಕಕುಮಾರ್, ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಎನ್.ಪುರುಷೋತ್ತಮ, ಕೊಡಿದಲರಾಜು, ವಿ.ಎಲ್.ಬಾಬು, ಕೆ.ಹೂವಣ್ಣ, ವಿ.ವಿದ್ಯಾಧರ, ಟಿ.ರಾಬಿಯಾ ನಿಸಾರ್, ಮುರುಳಿ ಮೋಹನರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net