ರೈತರ ಮೇಲೆ ಜಲಫಿರಂಗಿ, ಚಾರ್ಚ್‌ನನ್ನು ಖಂಡಿಸಿದ ವಿವಿಧ ಸಂಘಟನೆಗಳು

021220 Kampli Farmers Appeal
ಕಂಪ್ಲಿಯ ಶಿರಸ್ತೇದಾರ್ ರೇಖಾಮಠರಿಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ತಾಲೂಕು ಸಮಿತಿ ಪದಾಧಿಕಾರಿಗಳು ಮನವಿ ಬುಧವಾರ ಸಲ್ಲಿಸಿದರು.
Published on

ಕಂಪ್ಲಿ: ತಿದ್ದುಪಡಿ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ದಿಲ್ಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರ ಮೇಲೆ ಜಲಫಿರಂಗಿ ಮತ್ತು ಲಾಠಿ ಪ್ರಹಾರ ಮಾಡಿದ್ದು ಖಂಡನೀಯ. ಪ್ರಧಾನಮಂತ್ರಿಗಳು ದೇಶದ ರೈತರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಇಲ್ಲಿನ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ತಾಲೂಕು ಸಮಿತಿ ಸದಸ್ಯ ವಸಂತರಾಜ್ ಕಹಳೆ ಒತ್ತಾಯಿಸಿದರು.

ತಹಸಿಲ್ ಕಚೇರಿಯ ಶಿರಸ್ತೇದಾರ್ ರೇಖಾಮಠರಿಗೆ ಬುಧವಾರ ಮನವಿ ಸಲ್ಲಿಸಿ, ರೈತಾಪಿ ಕೃಷಿಯನ್ನು ನಾಶಗೊಳಿಸಿ ಕಂಪನಿ ಕೃಷಿಯನ್ನು ಪೋಷಿಸಲು ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ತಿದ್ದುಪಡಿಗಳನ್ನು ಚರ್ಚೆರಹಿತವಾಗಿ ಜಾರಿಗೊಳಿಸಲಾಗುತ್ತಿದೆ. ತಿದ್ದುಪಡಿ ವಾಪಾಸಾತಿಗಾಗಿ ಪೊಲೀಸ್, ಗಡಿ ಭದ್ರತಾಪಡೆ, ಪ್ಯಾರಾಮಿಲಿಟರಿ ಪಡೆಗಳನ್ನು ಬಳಸಿಕೊಂಡು ರೈತರ ಚಳವಳಿ ಹತ್ತಿಕ್ಕಲು ಮುಂದಾಗಿರುವುದು ಸಲ್ಲ. ಕೂಡಲೇ ಕೃಷಿ ಸಂಬಂಧಿತ ತಿದ್ದುಪಡಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಬಸವರಾಜ್, ವಿ.ಟಿ.ನಾಗರಾಜ, ಕೆ.ರಮೇಶ್, ಡಿ.ಮುರಾರಿ, ಎನ್.ರಾಜಭಕ್ಷಿ, ಟಿ.ನಿರಂಜನ್, ಟಿ.ಎಂ.ಭುವನ್, ಕೆ.ನೀಲಪ್ಪ ಪೇಂಟರ್, ಬಿ.ಖುರ್ಷಿದ್ ಬೇಗಂ, ಎಂ.ಅನುರಾಧ, ಆರ್.ನಾಗರಾಜ, ಧನಂಜಯ, ಎ.ಲಕ್ಷ್ಮಿನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net