ಬಲಕುಂದೇಶ್ವತ ತಾತನ ರಥೋತ್ಸವ ಅದ್ದೂರಿ

11 KAMPLI 01
ದೇವಸಮುದ್ರ ಗ್ರಾಮದಲ್ಲಿ ಬಲಕುಂದೇಶ್ವರ ತಾತನವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು.
Published on

ಕಂಪ್ಲಿ: ದೇವಸಮುದ್ರದ ಆರಾಧ್ಯ ದೈವ ಬಲಕುಂದೇಶ್ವರ ತಾತನವರ ಜಾತ್ರಾ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಗಳಿಂದ ಜರುಗಿತು. ದೇವಸ್ಥಾನದಿಂದ ಪಾದಗಟ್ಟೆತನಕ ರಥೋತ್ಸವ ಜರುಗಿತು. ರಥದ ಕಳಸಕ್ಕೆ ಸದ್ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂ, ಪತ್ರಿಯನ್ನು ಎಸೆದು ಭಕ್ತಿ ಸಮರ್ಪಿಸಿದರು. ಕಳಸಾದಾರತಿ, ಪೂರ್ಣಕುಂಭ, ಡೊಳ್ಳುಕುಣಿತ, ನಂದಿಕೋಲು, ತಾಷಾರಾಂಡೋಲ್, ಮಂಗಳವಾಧ್ಯಗಳು ಪಾಲ್ಗೊಂಡಿದ್ದವು. ಜಾತ್ರೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 63 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಪ್ರಮುಖರಾದ ಅಳ್ಳಳ್ಳಿ ವೀರೇಶ್, ಕಡೆಮನಿ ಪಂಪಾಪತಿ, ಪರಮೇಶ್, ಸೋಮೇಶೇಖರ್, ಹೊನ್ನೂರಪ್ಪ, ಗುಂಡಪ್ಪ, ಕರಿಯಪ್ಪ, ಗಣೇಶಗೌಡ, ಮಲ್ಲಿಗೌಡ, ಕರೇಗೌಡ್ರು ಪಕ್ಕಿರಪ್ಪ, ಕಡೆಮನಿ ಪಕ್ಕಿರಪ್ಪ, ಸೂಗೂರು ಕರಿಯಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿ ಜಿ.ಜಗನ್ನಾಥ, ರಮೀಜಾ, ಪಿ.ಬಸವರಾಜ್, ಕೆ.ಯರ‌್ರಿಸ್ವಾಮಿ, ಚಿಕ್ಕಮ್ಮ, ಆಶಾ ಕಾರ್ಯಕರ್ತೆಯರಾದ ನೇತ್ರಾವತಿ, ಸಹನಾ, ಜಯಮ್ಮ, ಗೌರಮ್ಮ, ಅಂಬಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net