ಪ್ರತಿಯೊಬ್ಬರೂ ಶರಣ ಸಾಹಿತ್ಯ ಅಳವಡಿಸಿಕೊಳ್ಳಿ

Kampli Sahitya
ಕಂಪ್ಲಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಚನ ದಿನದ ದತ್ತಿ ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಕಂಠಪಾಠ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಪ್ರಮುಖರಾದ ಜಿ.ಪ್ರಕಾಶ್, ಶ್ವೇತಾ ಅಕ್ಕಿ, ತಿಪ್ಪಣ್ಣ ಇತರರಿದ್ದರು.
Published on

ಕಂಪ್ಲಿ: ಜನ ಸಮೂಹ ಶರಣ ಸಮುದಾಯವಾಗಿ ಪರಿವರ್ತನೆಗೊಳ್ಳಬೇಕಿದೆ. ಅದಕ್ಕಾಗಿ ಜೀವನದಲ್ಲಿ ಶರಣ ಸಾಹಿತ್ಯ ಅಳವಡಿಸಿಕೊಳ್ಳಬೇಕು ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು.

ಇಲ್ಲಿನ ಶ್ರೀ ಪೇಟೆಬಸವೇಶ್ವರ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನ ಮತ್ತು ಪರಿಷತ್ ಸ್ಥಾಪನಾ ದಿನ, ಮನೆ ಮಂದಾರ ಮುದ್ದು ಮಕ್ಕಳ ದತ್ತಿ ಹಾಗೂ ಅಚ್ಚಪ್ಪ ಸೋಮಪ್ಪ ಹಂಪಮ್ಮ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತ ಜಾತ್ಯತೀತ ಸಮ ಸಮಾಜ ನಿರ್ಮಾಣಕ್ಕಾಗಿ ಶರಣರು ಶರಣ ಸಾಹಿತ್ಯವನ್ನು ರಚಿಸುವ ಮೂಲಕ ಲೋಕೋಪಕಾರ ಮಾಡಿದ್ದಾರೆ ಎಂದರು.

ಮುಖ್ಯಶಿಕ್ಷಕಿ ಶ್ವೇತಾ ಅಕ್ಕಿ ಮಾತನಾಡಿ, ಶತಶತಮಾನಗಳಿಂದ ತುಳಿತಕ್ಕೆ, ಶೋಷಣೆಗೆ ಈಡಾಗಿದ್ದ ಮಹಿಳೆಯರನ್ನು ಪುರುಷ ಸಮಾನರಾಗಿ ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವ ಮೂಲಕ ವಾಕ್‌ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದ ಶರಣರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ ಎ.ಮಂಜುನಾಥ (ಪ್ರಥಮ), ಸಿ.ಚೇತನಕುಮಾರ್ (ದ್ವಿತೀಯ), ಜಿ.ಲಕ್ಷ್ಮೀ (ತೃತೀಯ) ಬಹುಮಾನ ಗಳಿಸಿದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಮುಖ್ಯಶಿಕ್ಷಕ ತಿಪ್ಪಣ್ಣ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net