ಪ್ರತಿ ಗ್ರಾಮಕ್ಕೂ ಶುದ್ಧ ಕುಡಿವ ನೀರು ಒದಗಿಸುವ ಆಶಯ ಹೊಂದಿದ್ದಾಗಿ ಹೇಳಿದ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್

040622 Kampli Sanapura MLC Satish Visit
ಕಂಪ್ಲಿ ತಾಲೂಕಿನ ಸಣಾಪುರದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಕಂಪ್ಲಿ: ಜಿಲ್ಲೆಯ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿವ ನೀರು ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವ ಆಶಯ ಹೊಂದಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.

ತಾಲೂಕಿನ ನಂ.3ಸಣಾಪುರ ಗ್ರಾಪಂ ಕಚೇರಿಗೆ ಶನಿವಾರ ಭೇಟಿ ನೀಡಿ ನಂತರ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರತಿ ಗ್ರಾಮಕ್ಕೂ ಜೆಜೆಎಂ ಅನುಷ್ಠಾನಗೊಳಿಸಲಾಗುವುದು ಎಂದರು. ಇದೇ ವೇಳೆ ನಿವೇಶನ, ವಸತಿ ಸೌಲಭ್ಯ ಒದಗಿಸುವಂತೆ, ಪಟ್ಟಾ ನೀಡುವಂತೆ, ಸಣಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷೆ ಸಾವಿತ್ರಿ, ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಕೆ.ಭಾಸ್ಕರರೆಡ್ಡಿ, ವೀರನಗೌಡರೆಡ್ಡಿ, ಎಚ್.ಹೊನ್ನೂರಮ್ಮ, ಹುಲಿಗೆಮ್ಮ, ಬಸವರಾಜ ಕುರುಗೋಡು, ಕೆ.ಭಾರತಿ, ನಾಗಮ್ಮ, ಜ್ಯೋತಿ, ರಮಣಯ್ಯ ಎನ್ನುಂಟೆ, ಆರ್.ಕೆ.ಗವಿಸಿದ್ದಪ್ಪ, ಗೂಳಮ್ಮ ಕುರುಗೋಡು, ಈರಮ್ಮ ವಡ್ಡರ, ಪಕ್ಕೀರಪ್ಪ ಅಯ್ಯೋದಿ, ಲಕ್ಷ್ಮಿದೇವಿ, ಜಿ.ವೆಂಕಟೇಶ್, ಕೆ.ಸಂಧ್ಯಾಗಾಯತ್ರಿ, ಪಿಡಿಒ ಹಾಲಹರವಿ ಶೇಷಗಿರಿ, ಕಾರ್ಯದರ್ಶಿ ಕೆ.ದೊಡ್ಡಬಸಪ್ಪ ಇತರರಿದ್ದರು.

ಮನವಿ: ಸಣಾಪುರ ಸಹಿಪ್ರಾ ಶಾಲೆ ಮುಂಭಾಗದಲ್ಲಿನ ರಂಗಮಂದಿರ ಆವರಣಕ್ಕೆ ಹತ್ತು ಲಕ್ಷ ರೂ. ವೆಚ್ಚದಲ್ಲಿ 70 ಮತ್ತು 40ಅಡಿ ಛಾವಣಿ ಸೌಲಭ್ಯ ಕಲ್ಪಿಸಿಕೊಟ್ಟಲ್ಲಿ ವಿದ್ಯಾರ್ಥಿ ಮತ್ತು ಸಾರ್ವಜನಿಕರ ರಂಗ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ದೇವಸ್ಥಾನದಿಂದ ಮುಖ್ಯರಸ್ತೆಗೆ ಒಂದೂವರೆ ಕಿ.ಮೀ ಲಿಂಕ್ ರಸ್ತೆ ಅಭಿವೃದ್ಧಿಗೊಳಿಸುವಂತೆ ಮನವಿ ಸಲ್ಲಿಸಿದರು. ತಾಲೂಕಿನ ಇಟಗಿ ಗ್ರಾಮಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಂತೆ ಇಟಗಿ ಗ್ರಾಮಸ್ಥರು ವೈ.ಎಂ.ಸತೀಶ್‌ಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net