

ಕಂಪ್ಲಿ: ಮಕ್ಕಳು ಪಠ್ಯದೊಂದಿಗೆ ವ್ಯವಹಾರ ಜ್ಞಾನ ಗಳಿಸುವಲ್ಲಿ ಆಸಕ್ತಿ ತೋರಬೇಕು ಎಂದು ಮುಖ್ಯಶಿಕ್ಷಕ ಮಂಜಪ್ಪ ಹೂಗಾರ ತಿಳಿಸಿದರು.
ಎಮ್ಮಿಗನೂರು ಗ್ರಾಮದ ಎಸ್‌ಡಬ್ಲುಎಸ್ ಸ.ಹಿ.ಪ್ರಾ.ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ನಿತ್ಯ ಜೀವನದಲ್ಲಿನ ವ್ಯವಹಾರ ಕುರಿತು ಆಸಕ್ತಿ ವಹಿಸಿದಲ್ಲಿ ಮಾರುಕಟ್ಟೆಯ ನಾನಾ ವಸ್ತುಗಳ ಬೆಲೆ ಗೊತ್ತಾಗುತ್ತದೆ. ಬಾಲ್ಯದಲ್ಲಿಯೇ ಹಣವನ್ನು ಉಳಿತಾಯ ಮಾಡುವತ್ತ ಗಮನಹರಿಸಬೇಕು ಎಂದರು.
ಮಕ್ಕಳಿಗೆ ಗಣಿತದ ಮೂಲ ಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಕುರಿತ ಚಟುವಟಿಕೆಗಳನ್ನು ತಿಳಿಸಲಾಯಿತು.
ಟಿಕೆಟ್ ಬುಕಿಂಗ್, ತರಕಾರಿ ಮಳಿಗೆಗಳ ಮೂಲಕ ಹಣಕಾಸಿನ ವ್ಯವಹಾರ, ಗಣಿತದ ಪರಿಕಲ್ಪನೆ ಕುರಿತು ಮಾಹಿತಿ ನೀಡಲಾಯಿತು.