ಕಂಪ್ಲಿಯಲ್ಲಿ 30 ಹಾಸಿಗೆ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಕೆ

Kampli road development work launched
ಎಮ್ಮಿಗನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ಉಪಾಧ್ಯಕ್ಷ ಗಾದಿಲಿಂಗಪ್ಪ, ಸದಸ್ಯರಾದ ಸಾಯಿಬಣ್ಣ, ಜಯರಾಮ್ ಇತರರಿದ್ದರು.
Published on

ಕಂಪ್ಲಿ: ರೈತರ ಬಹು ವರ್ಷಗಳ ಬೇಡಿಕೆಯಂತೆ ಎಮ್ಮಿಗನೂರು-ಇಟಗಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.

ಎಮ್ಮಿಗನೂರು ಗ್ರಾಮದಲ್ಲಿ ಗ್ರಾಮಪಥ ಯೋಜನಡಿ 6.10ಕೋಟಿ ರೂ. ವೆಚ್ಚದಲ್ಲಿ ಎಮ್ಮಿಗನೂರು-ಇಟಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಇಟಗಿ ರಸ್ತೆಯನ್ನು ಒಂದು ಕಿ.ಮೀ. ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಿದ್ದು, ಉಳಿದ ರಸ್ತೆಯನ್ನು ಬಿಟಿ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

ಎಮ್ಮಿಗನೂರು ಗ್ರಾಮದಲ್ಲಿ ಎಪಿಎಂಸಿ ಮಾರುಕಟ್ಟೆ, 30 ಹಾಸಿಗೆ ಆಸ್ಪತ್ರೆ ನಿರ್ಮಾಣ, ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರ ಅನುಕೂಲಕ್ಕಾಗಿ 34 ಕೋಟಿ ರೂ.ಯಲ್ಲಿ ಮಾಗಾಣಿ ರಸ್ತೆಯ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು. ಪಿಎಂಜಿಎಸ್‌ವೈ ಜೆಇ ಪ್ರಸನ್ನ, ಪಿಡಿಒ ತಾರು ಲಕ್ಷ್ಮಣನಾಯ್ಕ, ಕಾರ್ಯದರ್ಶಿ ದೊಡ್ಡಬಸಪ್ಪ, ಪ್ರಮುಖರಾದ ಎಳ್ಳಾರ್ಥಿ ರಾಘವೇಂದ್ರ ರೆಡ್ಡಿ, ಎಚ್.ಜಡೆಪ್ಪ, ವೆಂಕಟರಾಜು, ವಿ.ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net