ಪ್ರವಾದಿಗಳ ತತ್ವಾದರ್ಶ ಅಳವಡಿಸಿಕೊಳ್ಳೋಣ; ಕಂಪ್ಲಿಯ ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ ಸಲಹೆ

09102022 Kampli EDD festival
Published on


ಕಂಪ್ಲಿ: ಮುಸ್ಲಿಮರು ಹ.ಮಹ್ಮದ್ ಪೈಗಂಬರ್ ಅವರ ತತ್ವ ಆದರ್ಶಗಳನ್ನು ಪರಿಪಾಲಿಸಬೇಕು ಎಂದು ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಅಬುಲ್ ಹಸನ್ ಖಾದ್ರಿ ಹೇಳಿದರು. ಪಟ್ಟಣದ ಸೈಯ್ಯದ್‌ಷಾಹ್ ಬಡೇಸಾ ದರ್ಗಾದಲ್ಲಿ ಭಾನುವಾರ ಈದ್‌ಮಿಲಾದ್ ನಿಮಿತ್ತ ಧರ್ಮ ಸಂದೇಶ ನೀಡಿದರು. ಎಲ್ಲ ಧರ್ಮದವರೂ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯ, ಸಾಮರಸ್ಯದಿಂದ ಇರಬೇಕು ಎಂದರು.

ಇದಕ್ಕೂ ಮೊದಲು ಕೋಟೆಯ ಝಂಡಾಕಟ್ಟೆಯಿಂದ ಮೆಕ್ಕಾ, ಮದೀನಾಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಜರುಗಿತು. ಗುರುಗಳಾದ ಸೈಯ್ಯದ್‌ಷಾಹ್ ಮೆಹಮೂದ್‌ಖಾದ್ರಿ, ಸೈಯ್ಯದ್‌ಷಾಹ್ ಖಾಜಾ ಮೈನೋದ್ದೀನ್‌ಖಾದ್ರಿ, ಸೈಯದ್‌ಷಾಹ್ ನೂರ್‌ಅಹ್ಮದ್‌ಖಾದ್ರಿ, ಹಾಜಿ ಜಿಯಾವುದ್ದೀನ್‌ಸಾಬ್, ಹಾಫೀಜ್ ನೌಶದ್‌ಅಹ್ಮದ್, ಪ್ರಮುಖರಾದ ಎಂ.ವಲಿಅಹ್ಮದ್‌ಸಾಬ್, ಎಂ.ಅಬ್ದುಲ್ ಗನಿಸಾಬ್, ಈದ್‌ಮಿಲಾದ್ ಕಮಿಟಿ ಅಧ್ಯಕ್ಷ ಯು.ಜಹೀರುದ್ದೀನ್, ಉಪಾಧ್ಯಕ್ಷ ಎಂ.ನಾಸೀರ್, ಬಿ.ಗೌಸ್‌ಪಾಷಾ, ಸಿ.ಅಖಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net