

ಕಂಪ್ಲಿ: ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗಂಗಾವತಿಯ ಸಾಹಿತಿ ರಮೇಶ್ ಗಬ್ಬೂರು ಹೇಳಿದರು.
ಇಲ್ಲಿನ ಮುಸ್ಲಿಂ ಶಾದಿಮಹಲ್‌ನಲ್ಲಿ ಭಾನುವಾರ ರಾಜ್ಯ ಬೌದ್ಧ ಸಮಾಜ ಮತ್ತು ಡಾ.ಅಂಬೇಡ್ಕರ್ ಅನುಯಾಯಿಗಳ ಬಳಗ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ವಿಚಾರಧಾರೆಗಳು ಮತ್ತು ಸಮುದಾಯದ ಜವಾಬ್ದಾರಿ ಕುರಿತ ಚಿಂತನೆಯ ಒಂದು ದಿನದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾಲಕರ ಕನಸನ್ನು ಈಡೇರಿಸುವಲ್ಲಿ ಮಕ್ಕಳು ಪ್ರಯತ್ನಿಸಬೇಕು. ಉತ್ತಮ ಶಿಕ್ಷಣ, ಉನ್ನತ ಹುದ್ದೆಗಳಿಸಲು ಜಾಗೃತಿ ತೋರಬೇಕು ಎಂದರು. ಕರ್ನಾಟಕ ಬೌದ್ಧ ಸಮಾಜದ ತಾಲೂಕು ಗೌರವಾಧ್ಯಕ್ಷ ಶಿಕ್ಷಕ ಚನ್ನಬಸಪ್ಪ ಮಾತನಾಡಿ, ಶಿಕ್ಷಣ ಪಡೆದು ನಿರುದ್ಯೋಗಿಯಾಗುವ ಬದಲು ಸ್ವ ಉದ್ಯೋಗ ಕಂಡುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು, ಸರ್ಕಾರಿ ಸೌಲಭ್ಯ ಪಡೆಯಲು ಜಾಗೃತಿ ಮೂಡಿಸಬೇಕು ಎಂದರು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಡಾ.ಅಂಬೇಡ್ಕರ್ ಕನಸಿನ ಕೂಸು
ಬೌದ್ಧ ಸಮಾಜದ ತಾಲೂಕು ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ್, ಪದಾಧಿಕಾರಿಗಳಾದ ಟಿ.ಶಿವಪ್ಪ, ಸುಧಾಕರ, ಎ.ಉಮೇಶ್, ಬಸವರಾಜ, ಪಿ.ಸಿ.ಅಂಜಿ, ಪಿ.ಸಿ.ಉಮೇಶ್, ಸಿ.ಕೆ.ಮಂಜುನಾಥ, ಪೂಜಾರಿ ತಿಮ್ಮಪ್ಪ, ಕೃಷ್ಣ, ಸಿದ್ಧಿ ಹರ್ಷ, ಪ್ರಮುಖರಾದ ಎಚ್.ಸಿ.ರಾಘವೇಂದ್ರ, ಏಸಯ್ಯ, ಹುಸೇನಪ್ಪ ಹಂಚಿನಾಳ, ಮೌಲಾ ಹುಸೇನ್, ವೀರೇಶಪ್ಪ, ದೊಡ್ಡಮನಿ, ವಿವಿಧ ಗ್ರಾಮಗಳ ಪಿಯುಸಿ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.