ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸದಿರಿ

Kampli Loka
ಕಂಪ್ಲಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಾಯುಕ್ತ ಪಿಎಸ್‌ಐ ಮಹ್ಮದ್ ರಫಿ ಮಾತನಾಡಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಕೃಷಿ ಅಧಿಕಾರಿ ಶ್ರೀಧರ್, ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ನೀರಾವರಿ ಎಇಇ ಎ.ಶ್ರೀನಿವಾಸ್ ಇತರರಿದ್ದರು.
Published on

ಕಂಪ್ಲಿ: ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಬಳ್ಳಾರಿ ಲೋಕಾಯುಕ್ತ ಪಿಎಸ್‌ಐ ಮಹ್ಮದ್ ರಫಿ ತಿಳಿಸಿದರು.

ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿನಾಕಾರಣ ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದರು.

ಕಂದಾಯ, ನೀರಾವರಿ ಮತ್ತು ಪುರಸಭೆಗೆ ಸೇರಿದ ತಲಾ ಒಂದು ಅರ್ಜಿ ಸ್ವೀಕರಿಸಲಾಗಿದೆ. ಬಳ್ಳಾಪುರದ ವಿತರಣಾ ನಾಲೆ, ಶಿಬರದಿನ್ನಿಯ ಆಂಜನೇಯ ಗುಡಿ ಸೇರಿ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಂಡಿದ್ದು ಪ್ರಗತಿಯಲ್ಲಿವೆ ಎಂದರು.

ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಬೀಜೋತ್ಪನ್ನ ಫಾರ್ಮ್‌ನಲ್ಲಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಅಧಿಕಾರಿ ಶ್ರೀಧರ್ ಅವರನ್ನು ವಿಚಾರಿಸಿ ಮಾಹಿತಿ ಪಡೆದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ಕೃಷಿ ಅಧಿಕಾರಿ ಶ್ರೀಧರ್, ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ನೀರಾವರಿ ಎಇಇ ಎ.ಶ್ರೀನಿವಾಸ್, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ್, ಇಸಿಒ ಜಿ.ವೀರೇಶ್, ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಂ, ವಿಷಯ ನಿರ್ವಾಹಕ ಎಸ್.ಚಿದಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net