ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

Jagadish, Basavaraj, Shivanayak Chess
ಜಗದೀಶ್, ಕೆ.ಎಂ.ಬಸವರಾಜ್, ಶಿವನಾಯ್ಕ.
Published on

ಕಂಪ್ಲಿ: ಹೊಸಪೇಟೆಯ ಮಹಿಳಾ ಸಮಾಜ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿಜಯನಗರ ಜಿಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗ್ರಾಪಂಗೆ ಒಳಪಡುವ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದ ತಾಲೂಕಿನ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೇವಸಮುದ್ರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಜಗದೀಶ್, ಕೆ.ಎಂ.ಬಸವರಾಜ್, ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಿವನಾಯ್ಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರು. ಇವರಿಗೆ ದೇವಸಮುದ್ರದ ಶಿಕ್ಷಕ ಕೆ.ರಾಮಚಂದ್ರರಾವ್, ರಾಮಸಾಗರದ ದೈಹಿಕ ಶಿಕ್ಷಕ ಅಶೋಕ್ ಮಾರ್ಗದರ್ಶನ ನೀಡಿದ್ದರು. ಇವರ ಸಾಧನೆಗೆ ಮುಖ್ಯಶಿಕ್ಷಕರಾದ ಶಕುಂತಲಾ, ಜೊನ್ನಲಗಡ್ಡ ಅರುಣಾ ಹರ್ಷವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net