ಸರ್ಕಾರದ ಸೌಲಭ್ಯಗಳು ಸದ್ಬಳಕೆಯಾಗಲಿ

kmp-3
ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಎಸ್ಟಿ ಸೌಲಭ್ಯಗಳ ಕುರಿತು ಪರಿಶಿಷ್ಟ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಪರಿಶಿಷ್ಟ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ನಿಲಯಪಾಲಕರಾದ ದೀಪಾ, ಉಲ್ತಿ ಮಲ್ಲಪ್ಪ, ಅನಿಲ್‌ಕುಮಾರ್ ಇದ್ದರು.
Published on

ಕಂಪ್ಲಿ: ತಾಲೂಕಿನ ಮೆಟ್ರಿ, ಸುಗ್ಗೇನಹಳ್ಳಿ, ದೇವಲಾಪುರದಲ್ಲಿ ಪರಿಶಿಷ್ಟ ವರ್ಗಗಳ ಸಮುದಾಯದ ಮನೆ-ಮನೆಗಳಿಗೆ ತೆರಳಿ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆ, ಸೌಲಭ್ಯಗಳನ್ನು ತಿಳಿಸಿಕೊಡುವ ಧರ್ತಿ ಅಬಾ (ಭೂಮಿಯ ತಂದೆ/ತಾಯಿ) ಕಾರ್ಯಕ್ರಮ ಗುರುವಾರ ನಡೆಯಿತು.

ಪಿಡಿಒ ಬೀರಲಿಂಗ ಮಾತನಾಡಿ, ಪರಿಶಿಷ್ಟ ವರ್ಗ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ, ಕೇಂದ್ರ ಸರ್ಕಾರದ ನಾನಾ ಯೋಜನೆಗಳಿದ್ದು, ಅವುಗಳನ್ನು ಅರಿತು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಾದಿಲಿಂಗಪ್ಪ, ಗ್ರಾಪಂ ಅಧ್ಯಕ್ಷರಾದ ನಾಗಮ್ಮ, ಪೂಜಾರಿ ಈರಮ್ಮ, ಪಿಡಿಒಗಳಾದ ಬೀರಲಿಂಗ, ಕೆ.ಎಚ್.ಶಶಿಕಾಂತ, ಕಾರ್ಯದರ್ಶಿಗಳಾದ ಎಚ್.ಶಿವಪ್ಪ, ಹುಲುಗಪ್ಪ, ಇಸಿಒ ಎಂ.ರೇವಣ್ಣ, ಗ್ರಾಪಂ ಸದಸ್ಯರಾದ ತಿಪ್ಪಯ್ಯ, ತಿಮ್ಮಕ್ಕ, ರಾಮಲಿಸ್ವಾಮಿ, ಶಂಕ್ರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net