ವಿದ್ಯುತ್ ಕಂಬ-ತಂತಿಗೆ ಹಬ್ಬಿದ ಬಳ್ಳಿ

KAMPLI-2
ದೇವಸಮುದ್ರ ಗ್ರಾಮದ ಕನಕದಾಸ ವೃತ್ತದ ಬಳಿ ವಿದ್ಯುತ್ ಕಂಬಗಳಿಗೆ ಬಳ್ಳಿ ಹಬ್ಬಿರುವುದು.
Published on

ಕಂಪ್ಲಿ; ದೇವಸಮುದ್ರ ಗ್ರಾಮದ ಕನಕದಾಸ ವೃತ್ತದ ಬಳಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿದ್ದು ಎತ್ತರಿಸಬೇಕು. ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಹಬ್ಬಿದ್ದು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವೃತ್ತದ ಬಳಿ ಎರಡು ಕಂಬಗಳಿಗೆ ಬಳ್ಳಿ ಹಬ್ಬಿದ್ದು ವಿದ್ಯುತ್ ಅವಘಡ ಆಗುವ ಸಂಭವವಿದೆ. ಕಂಬಗಳಿಂದ ಹಾದು ಹೋದ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರಿಂದ ವಾಹನಗಳಿಗೆ ತಾಗಿ ಆಪಾಯವಾಗುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೇ, ಮಗ್ಗದ ಓಣಿಯ ಕರಿಯಮ್ಮನ ಗುಡಿ ಬಳಿಯಲ್ಲಿ ವಿದ್ಯುತ್ ಕಂಬ ಶಿಥಿಲಗೊಂಡಿದ್ದು ಬೀಳುವ ಸಂಭವವಿದೆ.

ಈ ಸಮಸ್ಯೆಗಳ ಕುರಿತು ಜೆಸ್ಕಾಂ ಜೆಇ, ಮಾರ್ಗದಾಳುಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಪರಿಹರಿಸುವಲ್ಲಿ ಜೆಸ್ಕಾಂ ಇಲಾಖೆ ಮುತುವರ್ಜಿ ತೋರಬೇಕು ಎಂದು ಗ್ರಾಮದ ಪ್ರಮುಖರಾದ ದಂಡಿನ ದೊಡ್ಡಬಸಪ್ಪ, ಯಮನೂರಪ್ಪ, ಕೆ.ಮಂಜುನಾಥ, ಮೂರುಗುಡಿ ರುದ್ರಪ್ಪ, ಮೆಟ್ರಿ ಹನುಮಂತ, ಕೆ.ಪಾಂಡುರಂಗ ಸೇರಿ ಇತರರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಾರ್ಗದಾಳು ಭರತ್, ವಿದ್ಯುತ್ ಕಂಬಗಳಿಗೆ ಹರಡಿದ ಬಳ್ಳಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗುವುದು. ಶಿಥಿಲಗೊಂಡ ಕಂಬಗಳನ್ನು ತೆರವುಗೊಳಿಸಿ, ಹೊಸಕಂಬ ಅಳವಡಿಕೆಗೆ ಕ್ರಮವಹಿಸಲಾಗುವುದು.

ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ರಸ್ತೆ ಎತ್ತರಿಸಿದ್ದು, ವಿದ್ಯುತ್ ತಂತಿ ಎತ್ತರಿಸಿ ಕಟ್ಟುವ ಕಾಮಗಾರಿ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ, ಗ್ರಾಮಾಡಳಿತ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net