ಅಂತರ್ಜಲ ವೃದ್ಧಿಗೆ ಚೆಕ್ ಡ್ಯಾಂ ನಿರ್ಮಾಣ

kmp-1
ಕಂಪ್ಲಿಯ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ಕೊಠಡಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ನೆರವೇರಿಸಿದರು. ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಲಡ್ಡು ಹೊನ್ನೂರವಲಿ, ಡೆಕೋರೇಟರ್ ನಾಗರಾಜ, ಕರೇಕಲ್ ಮನೋಹರ, ಎಂ.ಗೋಪಾಲ ಇತರರಿದ್ದರು.
Published on

ಕಂಪ್ಲಿ: ಅಂತರ್ಜಲ ಸುಧಾರಣೆ ಹಾಗೂ ಜಾನುವಾರುಗಳಿಗೆ ಕುಡಿವ ನೀರಿಗಾಗಿ ಚೆಕ್ ಡ್ಯಾಂ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ದೇವಸಮುದ್ರ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕಂಪ್ಲಿಯ ಷಾ.ಮಿಯಾಚಂದ್ ಹೈಸ್ಕೂಲ್‌ನಲ್ಲಿ 35.50 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ದೇವಸಮುದ್ರ ಭಾಗದಲ್ಲಿ ವಲಸೆ ಬರುವ ಕುರಿ-ಮೇಕೆ ಸೇರಿದಂತೆ ಇತರ ಜಾನುವಾರುಗಳಿಗೆ ಕುಡಿವ ನೀರನ್ನು ಒದಗಿಸಲು, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ನೀರಿನ ಅನುಕೂಲ ಒದಗಿಸುವ ಉದ್ದೇಶದಿಂದ ಚೆಕ್‌ಡ್ಯಾಂ ನಿರ್ಮಿಸಲಾಗುವುದು ಎಂದರು.

ತಾಪಂ, ಜಿಪಂ ಚುನಾವಣೆಗಳಿಗೆ ತಯಾರಿ ನಡೆದಿದೆ. ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ, ಕ್ಷೇತ್ರದಲ್ಲಿ ಜೋಳ ಖರೀದಿ ಕೇಂದ್ರದ ಷರತ್ತುಗಳ ಸಡಿಲಿಕೆ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು.

ರಾಜ್ಯದಲ್ಲಿ ನಡೆದ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ ಕಳ್ಳತನ ಆಗಿರುವ ಕುರಿತು ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಆರೋಪಿಸಿದ್ದು, ನೂರಕ್ಕೆ ನೂರು ಸತ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಎನ್.ಹಬೀಬ್ ರೆಹಮಾನ್, ಸುಜಾತ, ಟಿ.ಎಂ.ಬಸವರಾಜ, ವೆಂಕೋಬ ನಾಯಕ, ಹೊನ್ನೂರಪ್ಪ, ಕೆ.ಷಣ್ಮುಖಪ್ಪ, ಬಿ.ಪಂಪಾಪತಿ, ಕೋರಿ ಚನ್ನಬಸವ, ಕುರಿ ಬಸವರಾಜ, ನೆಲ್ಲೂಡಿ ಬಸವರಾಜ, ಎಚ್.ಗುಂಡಪ್ಪ, ಖಾಜಾಸಾಬ್, ದಂಡಿನ ದೊಡ್ಡಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net