ಅಭಿವೃದ್ಧಿಗಾಗಿ ದೇವಾಂಗ ನಿಗಮ ಸ್ಥಾಪಿಸಿ; ದೇವಾಂಗ ಸಮುದಾಯದ ಕಾರ್ಯದರ್ಶಿ ಧೂಪದ ಸುಭಾಶ್ಚಂದ್ರ ಆಗ್ರಹ

06112022 kampli devanga community news
Published on

ಕಂಪ್ಲಿ: ದೇವಾಂಗ ಸಮುದಾಯದವರ ಅಭಿವೃದ್ಧಿಗಾಗಿ ದೇವಾಂಗ ನಿಗಮ ಮಂಡಳಿಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಇಲ್ಲಿನ ದೇವಾಂಗ ಸಮುದಾಯದ ಕಾರ್ಯದರ್ಶಿ ಧೂಪದ ಸುಭಾಶ್ಚಂದ್ರ ಆಗ್ರಹಿಸಿದರು.

ಪಟ್ಟಣದ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ದೇವಲ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿ, ದೇವಾಂಗ ಸೇರಿ ನೇಕಾರ ಸಮುದಾಯಗಳ ನೇಕಾರರಿಗೆ ಸರ್ಕಾರ ಗುರುತಿನ ಚೀಟಿ ನೀಡಬೇಕು. ನೇಕಾರರ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಅರ್ಚಕ ಸೇವೆ ಸಲ್ಲಿಸುತ್ತಿರುವ ಸಮಾಜದ ಮಿಟ್ಟಿ ಶಂಕರ್‌ರನ್ನು ಗೌರವಿಸಲಾಯಿತು. ದೇವಾಂಗ ಮಠದ ಮುದ್ದುಸಂಗಸ್ವಾಮಿ, ಪ್ರಮುಖರಾದ ಕರಡಕಲ್ ಪಂಪಾಪತಿ, ಒನಕೆ ವೆಂಕಟೇಶ್, ಪುಟ್ಟಿ ರಾಘವೇಂದ್ರ, ಮಾಗನೂರು ರಾಜೇಶ್ ವರ್ಮ, ಒನಕೆ ಶಂಕರ್, ಕರಡಕಲ್ ವಿರುಪಣ್ಣ, ಓದಾ ಅಂಬರೀಷ, ಕಾಳ್ಗಿ ನಾರಾಯಣಪ್ಪ, ಓದಾ ಬಸವರಾಜ್, ಕಾಳ್ಗಿ ಜಗದೀಶ್, ಯತ್ನಟ್ಟಿ ಈರಣ್ಣ, ಶೀಲವಂತರ ಸುಬ್ಬಣ್ಣ, ಹಂಪರಗುಂದಿ ನಾಗರಾಜ, ಗದ್ಗಿ ಶ್ರೀನಿವಾಸ್, ಪೋಡಿ ನಾರಾಯಣಪ್ಪ ಇತರರಿದ್ದರು. ಇದೇ ಸಂದರ್ಭ ವಸ್ತ್ರದಾನ ಮಾಡಲಾಯಿತು.

ಮುದ್ದಾಪುರ: ಗ್ರಾಮದಲ್ಲಿ ದೇವಲ ಮಹರ್ಷಿ ಜಯಂತ್ಯುತ್ಸವ ಜರುಗಿತು. ದೇವಾಂಗಮಠದ ಚೈತನ್ಯಸ್ವಾಮಿ ಮಾತನಾಡಿ, ದೇವಾಂಗಮುನಿಯು ದೇವ, ದಾನವ, ಗಂಧರ್ವ ಸೇರಿ ಎಲ್ಲರಿಗೂ ವಸ್ತ್ರದಾನ ಮಾಡುವ ಮೂಲಕ ನವ ನಾಗರಿಕತೆಗೆ ನಾಂದಿ ಹಾಡಿದ ಮಹರ್ಷಿಯಾಗಿದ್ದಾರೆ ಎಂದರು. ಇದಕ್ಕೂ ಮುನ್ನ ದೇವಾಂಗ ಮಹರ್ಷಿ ಭಾವಚಿತ್ರ ಮೆರವಣಿಗೆ ಜರುಗಿತು. ಮಂಗಳವಾಧ್ಯ, ಕಳಸಧಾರತಿ, ಪೂರ್ಣಕುಂಭ ಸೇರಿ ಜನಪದ ಕಲಾಪ್ರಕಾರಗಳು ಪಾಲ್ಗೊಂಡಿದ್ದವು. ವಸ್ತ್ರದಾನ, ಅನ್ನದಾನ ಜರುಗಿತು. ದೇವಾಂಗ ಸಮುದಾಯದ ಅಧ್ಯಕ್ಷ ಕೆ.ಕೊಮಾರಸ್ವಾಮಿ, ಬುದ್ದಿ ಶ್ರೀನಿವಾಸ್, ಪಿನ್ನಾಪತಿ ಯರ‌್ರಿಸ್ವಾಮಿ, ಗಂಜಿ ಮಂಜುನಾಥ, ವಟಾರ ವಿಠೋಬಣ್ಣ, ಬುದ್ದಿ ಪ್ರಭಾಕರ, ಬುದ್ಧಿ ರಾಘವೇಂದ್ರ, ಮರೆಪ್ಪ, ಕನಪ ಬಸವರಾಜ ಸೇರಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net