ಸೊಳ್ಳೆ ನಿಯಂತ್ರಿಸಿ ಡೆಂಗ್ಯು ತಡೆಯಿರಿ

Untitled design(4)
Published on

ಕಂಪ್ಲಿ: ಸೊಳ್ಳೆ ನಿಯಂತ್ರಣದಿಂದ ಡೆಂಗ್ಯು ಸೇರಿ ಹಲವು ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಳೆಗಾಲ ಆರಂಭವಾಗುತ್ತಿದ್ದು ಮನೆಯೊಳಗೆ, ಹೊರಗೆ ಸುತ್ತಲಿನ ವಾತಾವರಣದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಿ. ನೀರಿನ ಸಂಗ್ರಹ ತೊಟ್ಟಿಗಳನ್ನು ನಿತ್ಯ ಸ್ವಚ್ಛಗೊಳಿಸುವ ಮೂಲಕ ಡೆಂಗ್ಯು ಕಾರಕ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.

ಡೆಂಗ್ಯು ಕಾಯಿಲೆ ಹರಡುವ ವಿಧಾನ, ಅದರ ಲಕ್ಷಣಗಳು, ಸೊಳ್ಳೆ ಉತ್ಪತ್ತಿ ನಿಯಂತ್ರಣ ವಿಧಾನಗಳು, ಮುಂಜಾಗ್ರತಾ ಕ್ರಮಗಳು, ಔಷಧೋಪಚಾರದ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಜಾಗೃತಿಯನ್ನು ಮೂಡಿಸಿದರು.

ವೈದ್ಯರಾದ ವೀರೇಶ್, ಮಲ್ಲೇಶಪ್ಪ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ನೇತ್ರಾಧಿಕಾರಿ ಪ್ರಕಾಶಗೌಡ ಸೇರಿ ಆಶಾಕಾರ್ಯಕರ್ತೆಯರು ಇತರರಿದ್ದರು.

ವಾರ್ಡ್ ಕಾರ್ಯಕ್ರಮ: ಪಟ್ಟಣದ 3 ಮತ್ತು 4ನೇವಾರ್ಡ್‌ಗಳಲ್ಲಿ ಶುಕ್ರವಾರ ಡೆಂಗ್ಯು ಜಾಗೃತಿ ಕಾರ್ಯಕ್ರಮ ನಡೆಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಚನ್ನಬಸವರಾಜ ಡೆಂಗ್ಯು ಕಾಯಿಲೆ ಕುರಿತು ವಾರ್ಡ್ ಜನತೆಯಲ್ಲಿ ಜಾಗೃತಿ ಮೂಡಿಸಿದರು. ಎಚ್.ಐಒ ದೇವರಾಜ, ಆಶಾ ಕಾರ್ಯಕರ್ತೆಯರಾದ ಸೂರಯ್ಯ, ವೆಂಕಟಪದ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net