ಬೇಡಿಕೆ ಈಡೇರಿಸಿದರೆ ಧರಣಿ ವಾಪಸ್

Kampli Protest
ಕಂಪ್ಲಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಧರಣಿ ನಡೆಸಿದರು. ಕೆ.ಶಿವಕುಮಾರ್, ಡಾ.ಸಂದೀಪಕುಮಾರ್, ಆನಂದಕುಮಾರ್, ಕೆ.ಕುಮಾರ್, ಅಮರೇಗೌಡ, ಡಾ.ಡಿ.ಬಸವರಾಜ ಇತರರಿದ್ದರು.
Published on

ಕಂಪ್ಲಿ: ಅತಿ ಕಡಿಮೆ ಗೌರವಧನದಲ್ಲಿ ಹತ್ತಾರು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಕೆ.ಶಿವಕುಮಾರ್ ಆಗ್ರಹಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಕೈಗೊಂಡಿರುವ ಧರಣಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು. ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸಿದರೂ ಸರ್ಕಾರ ನಿರ್ಲಕ್ಷಿಸುತ್ತಿದೆ. ಈ ಬಾರಿ ನಮ್ಮ ಬೇಡಿಕೆ ಈಡೇರುವತನಕ ಧರಣಿ ವಾಪಸ್ ಪಡೆಯುವುದಿಲ್ಲ ಎಂದರು.

ಅತಿಥಿ ಉಪನ್ಯಾಸಕರಾದ ಡಾ.ಸಂದೀಪಕುಮಾರ್, ಆನಂದಕುಮಾರ್, ಕೆ.ಕುಮಾರ್, ಅಮರೇಗೌಡ, ಡಾ.ಡಿ.ಬಸವರಾಜ, ಎಚ್.ಮಲ್ಲಿಕಾರ್ಜುನ, ಮೈನುದ್ದೀನ್ ಬಾಷಾ, ಡಿ.ದಶರಥ, ರಮೇಶ್ ಪೂಜಾರ್, ಡಾ.ಲಕ್ಷ್ಮೀಬಾಯಿ, ಭವಾನಿ, ಮಂಜುಳಾ, ಸಣ್ಣಕ್ಕಿ ಮಾರೆಮ್ಮ, ಇಂದಿರಾ, ಯೋಗೇಶ್, ಪಾಂಡೇಶ, ಸಂಧ್ಯಾ, ಹರಿಪ್ರಿಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net